* ಫಿಲಿಪೈನ್ಸ್ - ಪ್ಯಾರಾನಾಕ್ ನಗರದ ಒಕಾಡಾ ಮನಿಲಾದಲ್ಲಿಆಸ್ಟ್ರೇಲಿಯಾದ ಪರಿಸರ ಪತ್ರಕರ್ತೆ ಜೆಸ್ಸಿಕಾ ಲೇನ್ ಅವರು "ಮಿಸ್ ಅರ್ಥ್ 2024" ಕಿರೀಟವನ್ನು ಅಲಂಕರಿಸಿದ್ದಾರೆ.
* ಕಳೆದ ವರ್ಷದ ವಿಜೇತ ಮಿಸ್ ಅರ್ಥ್ 2023 ರ ಅಲ್ಬೇನಿಯಾದ ಡ್ರಿಟಾ ಝಿರಿ ಅವರು ತಮ್ಮ ಪ್ರಶಸ್ತಿಯನ್ನು ಪಾಸು ಮಾಡಿದರು. ಭಾರತದಿಂದ ಗೌರಿ ಗೋಠಂಕರ (ಮಹಾರಾಷ್ಟ್ರ) ಇವರು ಭಾಗವಹಿಸಿದ್ದರು.
* ಮಿಸ್ ಅರ್ಥ್ ಸ್ಪರ್ಧೆಯು ವಿಶ್ವದ ಪ್ರಮುಖ ಸುಂದರಿ ಸ್ಪರ್ಧೆಗಳಲ್ಲೊಂದು ಆಗಿದ್ದು, ಮಹಿಳೆಯರ ಸೌಂದರ್ಯವನ್ನು ಮಾತ್ರವಲ್ಲದೆ, ಪರಿಸರ ಸಂರಕ್ಷಣೆ ಮತ್ತು ಪ್ರಕೃತಿಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದನ್ನು ಉದ್ದೇಶಿಸಿದೆ.
* ಜೆಸ್ಸಿಕಾ ಲೇನ್ ಅವರ ಆಯ್ಕೆಯ ಮೂಲಕ ಪರಿಸರ ವಿಚಾರಗಳಲ್ಲಿ ಆಸಕ್ತಿಯುಳ್ಳ ಮತ್ತು ಜಾಗೃತಿಗೊಳ್ಳುವ ಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ, ಇದು ಆಸ್ಟ್ರೇಲಿಯಾದ ಹೆಮ್ಮೆಯ ಕ್ಷಣವಾಗಿದೆ.
* ಜೆಸ್ಸಿಕಾ ಲೇನ್ ಅವರು ಈ ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ, ಪರಿಸರ ಸಂರಕ್ಷಣೆ, ಪ್ರಾಕೃತಿಕ ಸಂಪತ್ತಿನ ಮೌಲ್ಯವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ತಮ್ಮ ಕಿರೀಟವನ್ನು ಬಳಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಬುಧವಾರ, 13 ನವೆಂಬರ್ 2024
10:51 ಪೂರ್ವಾಹ್ನ
Daily PDF
ಜೆಸ್ಸಿಕಾ ಲೇನ್ ಮಿಸ್ ಅರ್ಥ್ 2024 ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯಾದ ಮಹಿಳೆ
Authored by:
Bhagya R K