* ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುರಿತ 'ಕ್ಯೂಎಸ್ ಗ್ಲೋಬಲ್ ಎಂಬಿಎ ರ್ಯಾಂಕಿಂಗ್ಸ್' 2025ರ ಪಟ್ಟಿ ಬಿಡುಗಡೆಯಾಗಿದ್ದು, IIM ಬೆಂಗಳೂರು ಮತ್ತೊಮ್ಮೆ ಉನ್ನತ ಜಾಗತಿಕ ನಿರ್ವಹಣಾ ಸಂಸ್ಥೆಗಳಲ್ಲಿ ಗುರುತಿಸಲ್ಪಟ್ಟಿದೆ.
* ಅಗ್ರ 100 ಶಿಕ್ಷಣ ಸಂಸ್ಥೆಗಳ ಪೈಕಿ ರಾಜ್ಯದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬಿಸ್ಸೆಸ್ (ಐಎಸ್‌ಬಿ) ಸೇರಿದಂತೆ ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಭಾರತದಲ್ಲಿ ಪೂರ್ಣಕಾಲಿಕ ಎಂಬಿಎ ಕೋರ್ಸ್‌ಗಳನ್ನು ನಡೆಸುವ 14 ಪ್ರತಿಷ್ಠಿತ ಸಂಸ್ಥೆಗಳು ಸ್ಥಾನ ಪಡೆದಿವೆ.
* ಬೆಂಗಳೂರು, ಅಹಮದಾಬಾದ್, ಕೋಳ್ಕೊತಾ ಐಐಎಂಗಳಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಕ್ಯೂಎಸ್ ವರದಿ ತಿಳಿಸಿದೆ.
* ಉನ್ನತ ಶಿಕ್ಷಣ ವ್ಯವಸ್ಥೆಯ ವಿಶ್ಲೇಷಣೆ ಇನ್‌ಸ್ಟಿ ನಡೆಸಿ, ಆ ಸಂಸ್ಥೆಗಳ ಗುಣಮಟ್ಟದ ಕುರಿತು ಲಂಡನ್ ಮೂಲದ ಕ್ಯೂಎಸ್, 'ಗ್ಲೋಬಲ್ ರ್ಯಾಂಕಿಂಗ್' ಪಟ್ಟಿಯನ್ನು ಪ್ರಕಟಿಸುತ್ತದೆ.
* ಐಐಎಂ ಬೆಂಗಳೂರು ಟಾಪ್ 50 ರೊಳಗಿನ ಏಕೈಕ ಭಾರತೀಯ ಎಂಬಿಎ ಸಂಸ್ಥೆಯಾಗಿ ‘ಹೂಡಿಕೆಯ ಮೇಲಿನ ಆದಾಯ’ಕ್ಕೆ 31 ನೇ ಶ್ರೇಯಾಂಕವನ್ನು ಹೊಂದಿದೆ. ಇದು ‘ಥಾಟ್ ಲೀಡರ್‌ಶಿಪ್’ ವಿಭಾಗದಲ್ಲಿ 57 ನೇ ಸ್ಥಾನದಲ್ಲಿದೆ ಮತ್ತು ಅತ್ಯುತ್ತಮ ಉದ್ಯೋಗದ ವಿಭಾಗದಲ್ಲಿ 39 ನೇ ಸ್ಥಾನದಲ್ಲಿದೆ. IIM ಕಲ್ಕತ್ತಾ 46 ನೇ ಸ್ಥಾನವನ್ನು ಪಡೆದುಕೊಂಡು ಉದ್ಯೋಗಕ್ಕಾಗಿ ಟಾಪ್ 50 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಸಂಸ್ಥೆಯಾಗಿದೆ.
* ಅಮೆರಿಕದ ಸ್ಟಾಂಡ್ ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬಿಸ್ಸೆಸ್ ಸತತ ಐದು ವರ್ಷಗಳಿಂದ ಮೊದಲ ಸ್ಥಾನದಲ್ಲಿದೆ. ಐಐಎಂಗಳ ಪೈಕಿ ಬೆಂಗಳೂರು (53), ಅಹಮದಾಬಾದ್ (60),ಕೋಲ್ಕತ್ತಾ (65), ಇಂದೋರ್, ಲಖನೌ, ಉದಯಪುರ, ಕೋಯಿಕ್ಕೋಡ್‌ನ ಐಐಎಂಗಳು, ಗಾಜಿಯಾಬಾದ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿ (ಐಎಂಟಿ), ಗುರುಗ್ರಾಮದ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (ಎಂಡಿಐ), ದಿಲ್ಲಿಯ ಕ್ಷೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಕೋಲ್ಕತ್ತಾದ ಇಂಟರ್ ನ್ಯಾಷನಲ್ ಮ್ಯಾನೇಜ್‌ಮೆಂಟ್ ಇನ್ ಸ್ಟಿಟ್ಯೂಟ್ ಮತ್ತು ಮುಂಬಯಿಯ ಸೋಮಯ್ಯ ವಿದ್ಯಾವಿಹಾರ ವಿಶ್ವವಿದ್ಯಾಲಯಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
* ಜಾಗತಿಕ ಟಾಪ್ 10 ಕಾಲೇಜುಗಳು
1. ಸ್ಟಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬಿಜಿನೆಸ್,
2. ವಾರ್ಟ್‌ನ್ ಸ್ಕೂಲ್ ಆಫ್ ಬಿಜಿನೆಸ್
3. ಹಾರ್ವರ್ಡ್ ಬಿಜಿನೆಸ್ ಸ್ಕೂಲ್
4. ಎಂಐಟಿ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್
5. ಲಂಡನ್ ಬಿಜಿನೆಸ್ ಸ್ಕೂಲ್
6. ಎಚ್ ಇಸಿ ಪ್ಯಾರಿಸ್
7. ಕೇಂಬ್ರಿಡ್ಜ್ (ಜಡ್ಜ್)
8. ಕೊಲಂಬಿಯಾ ಬಿಜಿನೆಸ್ ಸ್ಕೂಲ್
9. ಐಇ ಬಿಜಿನೆಸ್ ಸ್ಕೂಲ್
10. ಐಇಎಸ್‌ಇ ಬಿಜಿನೆಸ್ ಸ್ಕೂಲ್
ಶುಕ್ರವಾರ, 27 ಸೆಪ್ಟೆಂಬರ್ 2024
12:35 ಅಪರಾಹ್ನ
Daily PDF
ಜಾಗತಿಕ ಅತ್ಯುತ್ತಮ MBAಗಳಲ್ಲಿ ಶ್ರೇಯಾಂಕದ ಪರಂಪರೆಯನ್ನು ಮುಂದುವರೆಸಿದ IIM ಬೆಂಗಳೂರು
Authored by:
Jyoti Angadi