* ಪೂರೈಕೆ ಸರಣಿ ಸಮಸ್ಯೆಗಳಿಂದಾಗಿ ಆರು ತಿಂಗಳ ವಿಳಂಬದ ನಂತರ ಭಾರತೀಯ ಸೇನೆಯು ತನ್ನ ಮೊದಲ ಮೂರು AH-64E ಅಪಾಚೆ ದಾಳಿ ಹೆಲಿಕಾಪ್ಟರ್‌ಗಳನ್ನು ಡಿಸೆಂಬರ್‌ನಲ್ಲಿ ಸ್ವೀಕರಿಸಲು ಸಿದ್ಧವಾಗಿದೆ.
* ಅಪಾಚೆ ಹೆಲಿಕಾಪ್ಟರಗಳನ್ನು ಮರುಭೂಮಿಯಲ್ಲಿ ಕಾರ್ಯಾಚರಣೆಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದ್ದು,ವಿಶೇಷವಾಗಿ ಶಸ್ತ್ರಸಜ್ಜಿತ ದಾಳಿ ಮುಂದಿನ ವರ್ಷ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಿದ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ (LCH) ಅನ್ನು ಲಡಾಖ್‌ನಲ್ಲಿ ನಿಯೋಜಿಸಲು ಸೇನೆಯು ಸಜ್ಜಾಗಿದೆ.
* ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು 2020ರಲ್ಲಿ ಭಾರತ ಬೋಯಿಂಗ್ ಜತೆ 800 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಆರು ಭಾರತೀಯ ಪೈಲಟ್‌ಗಳು ಮತ್ತು 24 ಟೆಕ್ನಿಷಿಯನ್‌ಗಳಿಗೆ ಅಮೆರಿಕದಲ್ಲಿ ತರಬೇತಿಯನ್ನು ಒಳಗೊಂಡಂತೆ ಒಪ್ಪಂದವಾಗಿದೆ.
* ಭಾರತೀಯ ಸಶಸ್ತ್ರ ಪಡೆಗಳಾದ್ಯಂತ 39 ಭಾರೀ ದಾಳಿ ಹೆಲಿಕಾಪ್ಟರ್‌ಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಮಂಡಳಿ 45 ಸಾವಿರ ಕೋಟಿ ವೆಚ್ಚದಲ್ಲಿ 156 ಲಘು ಯುದ್ಧ ಹೆಲಿಕಾಪ್ಟರ್‌ಗಳ (ಎಲ್‌ಸಿಎಚ್) ಖರೀದಿಗೆ ಅನುಮೋದನೆ ನೀಡಿದೆ.
ಶುಕ್ರವಾರ, 27 ಸೆಪ್ಟೆಂಬರ್ 2024
1:20 ಅಪರಾಹ್ನ
Daily PDF
AH-64E ಅಪಾಚೆ 3 ಹೆಲಿಕಾಪ್ಟರ್ ಗಳು ಸೇನೆಗೆ ಸೇರ್ಪಡೆಯಾಗಲು ಸಜ್ಜು
Authored by:
Jyoti Angadi