* ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ (VSSC) ಯೋಜನಾ ನಿರ್ದೇಶಕ, ಹಿರಿಯ ವಿಜ್ಞಾನಿ ಎಂ. ಮೋಹನ್ ಅವರನ್ನು ಇಸ್ರೊದ ಪ್ರಮುಖ ಅಂಗಸ್ಥೆಯಾದ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್’ನ (Liquid Propulsion Systems Centre (LPSC)) ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಈ ಆದೇಶ ಹೊರಡಿಸಿದ್ದಾರೆ. ಇಸ್ರೊದೊಂದಿಗೆ 20 ವರ್ಷಕ್ಕೂ ಹೆಚ್ಚು ಕೆಲಸ ಮಾಡಿರುವ ಎಂ. ಮೋಹನ್ ಅವರು ಕೇರಳದ ಆಲಪ್ಪುಳ ಮೂಲದವರು.
* ಈ ಮೊದಲು LPSC ನಿರ್ದೇಶಕರಾಗಿದ್ದ ವಿ. ನಾರಾಯಣನ್ ಅವರನ್ನು ಇಸ್ರೊ ಅಧ್ಯಕ್ಷರನ್ನಾಗಿ ಇತ್ತೀಚೆಗೆ ಕೇಂದ್ರ ಸರ್ಕಾರ ನೇಮಿಸಿತ್ತು. ಹೀಗಾಗಿ ಆ ಸ್ಥಾನ ತೆರವಾಗಿತ್ತು.
* ಕೇರಳದ ತಿರುವನಂತಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ LPSC ಇಸ್ರೊದ ರಾಕೆಟ್‌ಗಳಿಗೆ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಸಂಚಾಲನೆಯ (ಪ್ರೊಪಲ್ಷನ್) ಸಾಧನ ಸಲಕರಣೆಗಳ ಅಭಿವೃದ್ಧಿ, ಸಂಶೋಧನೆ ಮಾಡುತ್ತದೆ.
* ಬೆಂಗಳೂರಿನಲ್ಲಿಯೂ ಈ ಸಂಸ್ಥೆಯ ಕಚೇರಿ ಇದೆ. ಇಸ್ರೊ ಅಧ್ಯಕ್ಷರಾಗಿದ್ದ ವಿ. ಸೋಮನಾಥ್ ಅವರ ಅಧಿಕಾರಾವಧಿ ಇದೇ ಜನವರಿ 14ರಂದು ಅಂತ್ಯವಾಗಿತ್ತು.
* ಆಲಪ್ಪುಳ ಮೂಲದ ಮೋಹನ್ ಅವರು ಈ ಹಿಂದೆ ಜೂನ್ 2023 ರಿಂದ ಜೂನ್ 2024 ರವರೆಗೆ ಮಾನವ ಬಾಹ್ಯಾಕಾಶ ಹಾರಾಟ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
* ಅವರು VSSC (R & D), ಉಪ ನಿರ್ದೇಶಕ VSSC (MME) ಮತ್ತು ಉಪ ನಿರ್ದೇಶಕರು, VSSC (ASOE) ಸಹ ನಿರ್ದೇಶಕರು, GSLV-F08/GSAT-6A ಮತ್ತು GSLV-F11/GSAT-7A ಯ ಯಶಸ್ವಿ ಕಾರ್ಯಾಚರಣೆಗಳಿಗೆ ಮಿಷನ್ ನಿರ್ದೇಶಕರು, ಕ್ರಯೋಜೆನಿಕ್ ಮೇಲಿನ ಹಂತದ (CUS) ಪ್ರಾಜೆಕ್ಟ್ ಡೈರೆಕ್ಟರ್, LPSC ಯಲ್ಲಿ ಮೆಟೀರಿಯಲ್ಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಎಂಟಿಟಿಯ ಉಪ ನಿರ್ದೇಶಕರು ಮತ್ತು ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಾಜೆಕ್ಟ್ (SRE-2), VSSC ಯ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
* ಮೋಹನ್ ಅವರು 2000 ರಲ್ಲಿ ಚಂದ್ರಯಾನ-1 ಮಿಷನ್‌ನ ಮೂನ್ ಇಂಪ್ಯಾಕ್ಟ್ ಪ್ರೋಬ್ (ಎಂಐಪಿ) ಯೋಜನೆಯ ಸಿಸ್ಟಮ್ ಲೀಡರ್ ಆಗಿದ್ದರು, ಇದು ಚಂದ್ರನ ಮೇಲ್ಮೈಯಲ್ಲಿ ರಾಷ್ಟ್ರಧ್ವಜವನ್ನು ಯಶಸ್ವಿಯಾಗಿ ಇರಿಸಿತು. ಅವರು 2016 ರಲ್ಲಿ ಇಸ್ರೋ ಪರ್ಫಾರ್ಮೆನ್ಸ್ ಎಕ್ಸಲೆನ್ಸ್ ಪ್ರಶಸ್ತಿ ಮತ್ತು 2010 ರಲ್ಲಿ ಇಸ್ರೋ ಮೆರಿಟ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಇಸ್ರೊದ LPSC ನಿರ್ದೇಶಕರಾಗಿ ವಿಜ್ಞಾನಿ ಎಂ. ಮೋಹನ್ ನೇಮಕ
Published by Yallamma G
28 ಜನವರಿ 2025