* ಬೆನ್ನಲ್ಲೇ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿ ಎದುರಾಗಿದೆ. ಭಾರತೀಯ ವಿದೇಶಾಂಗ ವೆವಹಾರಗಳ ಸಚಿವಾಲಯ ಇರಾನ್ ಮತ್ತು ಇಸ್ರೇಲ್ ಗೆ ಪ್ರಯಾಣಿಸದಂತೆ ಭಾರತೀಯರಿಗೆ ಸಲಹೆ ನೀಡಿದೆ.
* ಇರಾನ್‌ನ ಸ್ಟೇಟ್ ಆಫ್ ಹಾರ್ಮುಜ್ ಬಳಿ ಇಸ್ರೇಲ್ ಮೂಲದ ಎಂಎಸ್‌ಸಿ ಎರೀಸ್ ಎಂಬ ಹಡಗನ್ನು ಇರಾನ್ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಸಿಬ್ಬಂದಿಯು ಜಪ್ತಿ ಮಾಡಿದ್ದಾರೆ. ಆದರೆ, ಈ ಹಡಗಿನಲ್ಲಿ 17 ಭಾರತೀಯರಿದ್ದಾರೆ. ಇವರನ್ನು ಬಿಡುಗಡೆ ಮಾಡಬೇಕು ಎಂದು ಭಾರತವು ನಿರಂತರವಾಗಿ ಇರಾನ್ ಜತೆ ಚರ್ಚಿಸುತ್ತಿದೆ. ಇದರ ಬೆನ್ನಲ್ಲೇ, ಭಾರತೀಯರ ಜತೆ ಸಂಪರ್ಕ ಸಾಧಿಸಲು ಇರಾನ್ ಅನುಮತಿ ನೀಡಿದೆ.
* ಅಕ್ಟೋಬರ್ 7ರ ದಾಳಿಯ ಬಳಿಕ ಸಾವಿರಾರು ಪ್ಯಾಲೆಸ್ತೀನಿಯನ್ ಮತ್ತು ಅರಬ್ ವಲಸಿಗರ ಕೆಲಸದ ಪರವಾನಗಿಗಳನ್ನು ಇಸ್ರೇಲ್ ಅಮಾನತುಗೊಳಿಸಿತು. ಈ ಬೆಳವಣಿಗೆಯಿಂದ ಇಸ್ರೇಲ್‌ನಲ್ಲಿ ಈ ಹಿಂದೆ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗ ಮಾಡುತ್ತಿದ್ದ ಸಾವಿರಾರು ಸಂಖ್ಯೆಯ ಜನರು ಉದ್ಯೋಗ ಕಳೆದುಕೊಳ್ಳುವಂತಾಯಿತು.
* ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿ, ಹಿರಿಯ ಅಧಿಕಾರಿಗಳನ್ನು ಹತ್ಯೆಗೈದ ಬಳಿಕ ಪ್ರತೀಕಾರದ ದಾಳಿಗೆ ಇರಾನ್ ಸಜ್ಜಾಗಿದೆ. ಇನ್ನೊಂದೆಡೆ ಪ್ರತ್ಯುತ್ತರ ನೀಡಲು ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸರಕಾರವೂ ಯುದ್ಧದ ಸಿದ್ಧತೆ ಕೈಗೊಂಡಿದೆ.
ಇಸ್ರೇಲ್ ಮೇಲೆ ಇರಾನ್ ದಾಳಿ
Published by Akshata Halli
15 ಏಪ್ರಿಲ್ 2024