➤ ಜಾಗತಿಕ ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ 'ಇಪ್ಸೋಸ್' (Ipsos) ಬಿಡುಗಡೆ ಮಾಡಿರುವ 'ಕ್ವಾಲಿಟಿ ಆಫ್ ಕೇರ್ ಪರ್ಸೆಪ್ಷನ್ ಇಂಡೆಕ್ಸ್ 2026' (Ipsos Quality of Care Perception Index 2026) ವರದಿಯಲ್ಲಿ ಭಾರತವು ಅತ್ಯುತ್ತಮ ಸಾಧನೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದೆ.
➤ ಮೊದಲ ಮೂರು ಸ್ಥಾನಗಳು:
1.ಮೊದಲ ಸ್ಥಾನ: ಮಲೇಷ್ಯಾ (Malaysia)
2.ಎರಡನೇ ಸ್ಥಾನ: ಸಿಂಗಾಪುರ (Singapore)
3.ಮೂರನೇ ಸ್ಥಾನ: ಭಾರತ (India)
- ಈ ಜಾಗತಿಕ ಸಮೀಕ್ಷೆಯಲ್ಲಿ ವಿಯೆಟ್ನಾಂ (4ನೇ ಸ್ಥಾನ), ಆಸ್ಟ್ರೇಲಿಯಾ (5ನೇ ಸ್ಥಾನ) ಮತ್ತು ನೆದರ್ಲ್ಯಾಂಡ್ಸ್ (6ನೇ ಸ್ಥಾನ) ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
- ಒಟ್ಟು 32 ದೇಶಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಸುಮಾರು 22,528 ವಯಸ್ಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
➤ ಭಾರತಕ್ಕೆ ಸಂಬಂಧಿಸಿದ ಪ್ರಮುಖ ಅಂಕಿ-ಅಂಶಗಳು (Important Findings for India):
- ಶೇ. 68ರಷ್ಟು ಭಾರತೀಯರು ದೇಶದ ಆರೋಗ್ಯ ಸೇವೆಗಳ ಗುಣಮಟ್ಟದ ಬಗ್ಗೆ ಸಮಾಧಾನಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಶೇ. 64ರಷ್ಟು ಜನರು ತುರ್ತು ಸಂದರ್ಭಗಳಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲು ನಮ್ಮ ಆರೋಗ್ಯ ವ್ಯವಸ್ಥೆ ಸಮರ್ಥವಾಗಿದೆ ಎಂದು ನಂಬಿದ್ದಾರೆ.
- ಶೇ. 73ರಷ್ಟು ಮಂದಿಗೆ ವೈದ್ಯರ ಭೇಟಿಗೆ ಅಪಾಯಿಂಟ್ಮೆಂಟ್ ಪಡೆಯುವುದು ಕಷ್ಟಕರವಾಗಿಲ್ಲ ಎಂದು ತಿಳಿಸಿದ್ದಾರೆ.
- ಶೇ. 81ರಷ್ಟು ಜನರು ಔಷಧಾಲಯಗಳ (Pharmacies) ಸುಲಭ ಲಭ್ಯತೆಯನ್ನು ಶ್ಲಾಘಿಸಿದ್ದಾರೆ.
- ಆದರೆ, ಇದೇ ವೇಳೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 74ರಷ್ಟು ಜನರು ಆರೋಗ್ಯ ಸೇವೆಯ ವೆಚ್ಚ (Cost & Affordability) ಹೆಚ್ಚು ಎಂಬ ಕಳವಳವನ್ನ ಸಹ ವ್ಯಕ್ತಪಡಿಸಿದ್ದಾರೆ.