➤ ನವದೆಹಲಿ: ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಎಲ್ಲಿ ನೋಡಿದರೂ 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರದ್ದೇ ಹೆಸರು. ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದ ಈ ಬಿಹಾರ ಮೂಲದ ಎಡಗೈ ಬ್ಯಾಟರ್, ಇದೀಗ ಭಾರತೀಯ ಟಿ20 (T20) ತಂಡಕ್ಕೆ ಚೊಚ್ಚಲ ಬಾರಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 
➤ ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಗೇಮ್ಸ್‌ಗಾಗಿ ಪ್ರಕಟಿಸಲಾದ ಭಾರತ ಟಿ20 ತಂಡದಲ್ಲಿ ವೈಭವ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
➤ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ದಾಖಲೆ ಪತನ: ಕೇವಲ 15 ವರ್ಷ ಮತ್ತು 71 ದಿನಗಳ ವಯಸ್ಸಿನ ವೈಭವ್ ಸೂರ್ಯವಂಶಿ, ಕ್ರಿಕೆಟ್ ದೂಡ್ಡಣ್ಣ ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಈ ದಾಖಲೆ ಬರೆದಿದ್ದರು. ಇಷ್ಟೇ ಅಲ್ಲದೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಶಫಾಲಿ ವರ್ಮಾ (15 ವರ್ಷ 239 ದಿನ) ಅವರ ಹೆಸರಲ್ಲಿದ್ದ ಕಿರಿಯ ವಯಸ್ಸಿನ ಆಯ್ಕೆಯ ದಾಖಲೆಯನ್ನೂ ವೈಭವ್ ಈಗ ಮುರಿದಿದ್ದಾರೆ.
➤ ಐಪಿಎಲ್ 2026 ರಲ್ಲಿ ಸೂರ್ಯವಂಶಿ ಸೃಷ್ಟಿಸಿದ ಸುನಾಮಿ:
- ಒಟ್ಟು ರನ್‌ಗಳು: 776 ರನ್
- ಸ್ಟ್ರೈಕ್ ರೇಟ್: 237.30
- ಬಾರಿಸಿದ ಸಿಕ್ಸರ್‌ಗಳು: 72 ಸಿಕ್ಸರ್ (ದಾಖಲೆ)
- ಗೆದ್ದ ಪ್ರಶಸ್ತಿಗಳು: ಆರೆಂಜ್ ಕ್ಯಾಪ್, ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ (MVP), ಎಮರ್ಜಿಂಗ್ ಪ್ಲೇಯರ್

➤ ಭಾರತ ಟಿ20 ತಂಡದ ನಾಯಕತ್ವದಲ್ಲಿ ಭಾರಿ ಬದಲಾವಣೆ: ಶ್ರೇಯಸ್ ಅಯ್ಯರ್‌ಗೆ ಪಟ್ಟ: ವೈಭವ್ ಸೂರ್ಯವಂಶಿ ಆಯ್ಕೆಯ ಜೊತೆಗೆ ಭಾರತ ಟಿ20 ತಂಡದ ನಾಯಕತ್ವದಲ್ಲೂ ಬಿಸಿಸಿಐ (BCCI) ಭಾರಿ ಬದಲಾವಣೆ ಮಾಡಿದೆ. ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಲಾಗಿದೆ. 
➤ ಸೂರ್ಯಕುಮಾರ್ ಯಾದವ್‌ಗೆ ಶಾಕ್: ಇತ್ತೀಚಿನ ದಿನಗಳಲ್ಲಿ ಸತತ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದ ಹಿರಿಯ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬರುವ ಮೂರೂ ಪ್ರಮುಖ ಸರಣಿಗಳಿಂದ (ಐರ್ಲೆಂಡ್, ಇಂಗ್ಲೆಂಡ್ ಮತ್ತು ಏಷ್ಯನ್ ಗೇಮ್ಸ್) ಹೊರಗಿಡಲಾಗಿದೆ.

➤ ಭಾರತದ ಮುಂಬರುವ ಟಿ20 ಸರಣಿಗಳ ವೇಳಾಪಟ್ಟಿ: