➤ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಋತುವಿಗಾಗಿ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರ ನಿರ್ಗಮನದ ನಂತರ, ವೆಸ್ಟ್ ಇಂಡೀಸ್‌ನ ಮಾಜಿ ದೈತ್ಯ ಆಲ್‌ರೌಂಡರ್ ಕೀರನ್ ಪೊಲಾರ್ಡ್ (Kieron Pollard) ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನೂತನ ಮುಖ್ಯ ಕೋಚ್ (Head Coach) ಆಗಿ ನೇಮಕ ಮಾಡಲಾಗಿದೆ.
➤ ಕಳೆದ ಕೆಲವು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಪೊಲಾರ್ಡ್, ಈಗ ತಂಡದ ಪೂರ್ಣಪ್ರಮಾಣದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
➤ ಜೋಬರ್ಗ್ ಸೂಪರ್ ಕಿಂಗ್ಸ್‌ನಿಂದ (SA20) ಹಿಂದೆ ಸರಿದ ಪೊಲಾರ್ಡ್ : ಮುಂಬೈ ಇಂಡಿಯನ್ಸ್‌ನ ಹೆಡ್ ಕೋಚ್ ಹುದ್ದೆ ವಹಿಸಿಕೊಂಡ ಬೆನ್ನಲ್ಲೇ ಕೀರನ್ ಪೊಲಾರ್ಡ್ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ SA20 ಲೀಗ್ ನ ಮುಂದಿನ ಆವೃತ್ತಿಯಲ್ಲಿ ಆಡದಿರಲು ಪೊಲಾರ್ಡ್ ತೀರ್ಮಾನಿಸಿದ್ದಾರೆ.
ಇತ್ತೀಚೆಗೆ ನಡೆದ SA20 ಹರಾಜಿನಲ್ಲಿ ಸಿಎಸ್‌ಕೆ (CSK) ಮಾಲೀಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ (Joburg Super Kings) ತಂಡವು ಪೊಲಾರ್ಡ್ ಅವರನ್ನು 1.5 ಮಿಲಿಯನ್ ರಾಂಡ್ (ಸುಮಾರು ₹85 ಲಕ್ಷ) ನೀಡಿ ಖರೀದಿ ಮಾಡಿತ್ತು. ಆದರೆ, ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿರುವ ಕಾರಣ, ಹಿತಾಸಕ್ತಿ ಸಂಘರ್ಷ (Interest Conflict) ತಪ್ಪಿಸಲು ಮತ್ತು ಐಪಿಎಲ್ 2027ರ ಸಿದ್ಧತೆಯತ್ತ ಸಂಪೂರ್ಣ ಗಮನಹರಿಸಲು ಅವರು SA20 ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
➤ ಪ್ರಶಸ್ತಿ ಬರ ನೀಗಿಸುವತ್ತ ಮುಂಬೈ ಇಂಡಿಯನ್ಸ್ ಕಣ್ಣು: ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿಗೆ 2020 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು. ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಎಂಐ, ದೀರ್ಘಕಾಲದ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಗುರಿಯೊಂದಿಗೆ ಮುಂಬರುವ ಐಪಿಎಲ್ 2027ರ ಹರಾಜು ಮತ್ತು ತಂತ್ರಗಾರಿಕೆಗೆ ಹೊಸ ರೂಪ ನೀಡಲು ಸಜ್ಜಾಗುತ್ತಿದೆ.
ಮುಂಬೈ ಇಂಡಿಯನ್ಸ್ ಪರ ಆಟಗಾರನಾಗಿ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಅಪಾರ ಅನುಭವ ಹೊಂದಿರುವ ಕೀರನ್ ಪೊಲಾರ್ಡ್ ಅವರ ಮಾರ್ಗದರ್ಶನದಲ್ಲಿ ತಂಡ ಮತ್ತೆ ಚಾಂಪಿಯನ್ ಪಟ್ಟಕ್ಕೇರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
IPL 2027: ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಕೀರನ್ ಪೊಲಾರ್ಡ್ ನೇಮಕ; SA20 ಲೀಗ್ನಿಂದ ಮಾಜಿ ಆಲ್‌ರೌಂಡರ್ ಹೊರಕ್ಕೆ!
Published by Akshata Halli
1 hour ago