➤ ಕೊಲಂಬೊ ಬಂದರು ಲಾಜಿಸ್ಟಿಕ್ಸ್ ಹಬ್ ಯೋಜನೆ: ಶ್ರೀಲಂಕಾದ ಕೊಲಂಬೊ ಬಂದರಿನಲ್ಲಿ 
392 ಮಿಲಿಯನ್ ವೆಚ್ಚದ ನೂತನ ಲಾಜಿಸ್ಟಿಕ್ಸ್ ಹಬ್ ಅಭಿವೃದ್ಧಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮೂಲದ ಚೀನಾ ಹಾಂಗ್‌ಕಾಂಗ್ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ಸ್ ಸಂಸ್ಥೆ ಯೋಜನೆಯಿಂದ ಹಿಂದೆ ಸರಿದಿದೆ.
➤ ಉತ್ತರಾಖಂಡದ ನೂತನ ರಾಜ್ಯಪಾಲರು: ರಾಜಭವನದಲ್ಲಿ (ಲೋಕಭವನ) ನಡೆದ ಸಮಾರಂಭದಲ್ಲಿ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಿಂದ ಪ್ರಮಾಣವಚನ ಸ್ವೀಕರಿಸುವ ಮೂಲಕ ಧಾಲ್ ಸಿಂಗ್ ಬಿಸೇನ್ ಅವರು ಉತ್ತರಾಖಂಡದ ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
➤ ಪ್ರಿಯಾ ಗೋಲ್ಡ್ ಬಿಸ್ಕತ್‌ಗಳ ಆಮದು ನಿಷೇಧ: ಭಾರತದ ಎಫ್‌ಎಸ್‌ಎಸ್‌ಎಐ (FSSAI) ತನಿಖೆಯ ಬಳಿಕ ಗುಣಮಟ್ಟದ ಕೊರತೆ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತದ ಪ್ರಿಯಾ ಗೋಲ್ಡ್ ಬಿಸ್ಕತ್‌ಗಳ ಆಮದು ಹಾಗೂ ಮಾರಾಟವನ್ನು ನೇಪಾಳ ಸರ್ಕಾರ ನಿಷೇಧಿಸಿದೆ.
➤ ವಿಶ್ವದ ಅತ್ಯಂತ ಕಿರಿಯ ರೇಸಿಂಗ್ ಚಾಂಪಿಯನ್: ಭಾರತದ 10 ವರ್ಷದ ಉದಯೋನ್ಮುಖ ರೇಸರ್ ಅರ್ಷಿ ಗುಪ್ತ ಅವರು ರೋಟಾಕ್ಸ್ ಮ್ಯಾಕ್ಸ್ ಚಾಲೆಂಜ್ ಮಿನಿ ಚಾಂಪಿಯನ್‍ಷಿಪ್ ಗೆಲ್ಲುವ ಮೂಲಕ ವಿಶ್ವದ ಅತ್ಯಂತ ಕಿರಿಯ ವಿಜೇತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
➤ ಇರಾನ್‌ನ ನೂತನ ರಕ್ಷಣಾ ಸಚಿವ: ಕಳೆದ ಫೆಬ್ರವರಿಯಲ್ಲಿ ನಡೆದ ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಮಾಜಿ ರಕ್ಷಣಾ ಸಚಿವ ಅಜೀಜ್ ನಾಸಿರ್‌ಜಾದೆ ಮೃತಪಟ್ಟ ಹಿನ್ನೆಲೆಯಲ್ಲಿ ಮೆಹ್ದಾದ್ ಅಖ್ಯಾ ಅವರು ಸಂಸತ್ತಿನ ಅನುಮೋದನೆ ಪಡೆದು ಇರಾನ್‌ನ ನೂತನ ರಕ್ಷಣಾ ಸಚಿವರಾಗಿ ಆಯ್ಕೆಯಾಗಿದ್ದಾರೆ.
➤ ಕೆನಡಾದಲ್ಲಿ ಭಾರತೀಯ ಮೂಲದ ಮೇಯರ್‌ಗಳು: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಮೂಲದ ಹರ್ಷನ್ ರಾಮದಾಸ್ ಮತ್ತು ಸುರೀಂದರ್ ಪಾಲ್ ರಾಥೋರ್ ಮೇಯರ್‌ಗಳಾಗಿ ಆಯ್ಕೆಯಾಗಿದ್ದಾರೆ.
➤ ಅಸ್ಸಾಂನಲ್ಲಿ 'ಶಿಲ್ಪ ಸಮಾಗಮ ಮೇಳ': ದೇಶದ ವಿವಿಧ ಭಾಗಗಳ ಕುಶಲಕರ್ಮಿಗಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಥಳೀಯ ಕಲಾವಿದರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕೇಂದ್ರ ಸಚಿವಾಲಯದ ಆಶ್ರಯದಲ್ಲಿ ಅಸ್ಸಾಂನ ಗುವಾಹತಿಯಲ್ಲಿ ಅಕ್ಟೋಬರ್ 21 ರಿಂದ 28 ರವರೆಗೆ 'ಶಿಲ್ಪ ಸಮಾಗಮ ಮೇಳ' ಆಯೋಜಿಸಲಾಗಿದೆ.
➤ ಕ್ಲಿನಿಕಲ್ ಸಂಶೋಧನೆಗೆ ಜಾಗತಿಕ ಸಹಯೋಗ: ಕ್ಲಿನಿಕಲ್ ಸಂಶೋಧನೆಗಳನ್ನು ಸುಧಾರಿಸಲು ಅಸ್ಟ್ರಾಜಿನಕಾ ಮತ್ತು ಒರಾಕಲ್ ಸಂಸ್ಥೆಗಳು ಜಾಗತಿಕ ಸಹಯೋಗವನ್ನು ಘೋಷಿಸಿದ್ದು, ಇದರಡಿ ಅಬುಧಾಬಿಯಲ್ಲಿ AI ತಂತ್ರಜ್ಞಾನ ಬಳಸಿ ಅಧಿಕ ರಕ್ತದೊತ್ತಡ ಕುರಿತ ಮೊದಲ ವೈದ್ಯಕೀಯ ಸಂಶೋಧನೆಯನ್ನು ಕೈಗೊಳ್ಳಲಾಗುತ್ತಿದೆ.
➤ 'ಅಗ್ರಿ ವೆಲ್ಫೇರ್ ಪೋರ್ಟಲ್' ಬಿಡುಗಡೆ: ರೈತರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ನೆರವುಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ನವೀಕರಿಸಿದ 'ಅಗ್ರಿ ವೆಲ್ಫೇರ್ ಪೋರ್ಟಲ್' ಅನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಡುಗಡೆ ಮಾಡಿದ್ದಾರೆ.
➤  'ರುದ್ರ' ಬ್ರೈಲ್ ಪ್ರಿಂಟರ್‌ಗೆ ಜಾಗತಿಕ ಮನ್ನಣೆ: ಸಂಭಾಷಣೆಯನ್ನು ಬ್ರೈಲ್ ಲಿಪಿಗೆ ಪರಿವರ್ತಿಸುವ ಆಂಧ್ರಪ್ರದೇಶದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಲಿಂಗಂಪಲ್ಲಿ ಹಿಮಜಾ ರೂಪಿಸಿದ ಧ್ವನಿ ಆಧಾರಿತ ಬ್ರೈಲ್ ಪ್ರಿಂಟರ್ 'ರುದ್ರ' ಜೇಮ್ಸ್ ಡೈಸನ್ ಜಾಗತಿಕ ಪ್ರಶಸ್ತಿಯ ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
➤ ಝೀ ಸ್ಟುಡಿಯೋಸ್‌ನ ನೂತನ ಬಿಸಿನೆಸ್ ಹೆಡ್: ಝೀ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಸಿನಿಮಾ ನಿರ್ಮಾಣ ಮತ್ತು ವಿತರಣಾ ವಿಭಾಗವನ್ನು ಮುನ್ನಡೆಸಲು ಝೀ ಸ್ಟುಡಿಯೋಸ್‌ನ ನೂತನ ಬಿಸಿನೆಸ್ ಹೆಡ್ ಆಗಿ ಸೂರಜ್ ಸಿಂಗ್ ಅವರನ್ನು ನೇಮಕ ಮಾಡಿದ್ದು, ಇವರು ನವೆಂಬರ್ 10 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.