* 2024 ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಖ್ಯ ಕೋಚ್ ಆಗಿ ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ ಅವರನ್ನು ನೇಮಕ ಮಾಡಲಾಗಿದೆ.
* 2023ರ 16ನೇ ಆವೃತ್ತಿಯ IPLನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ನಾಲ್ಕು ಪಂದ್ಯಗಳನ್ನು ಮಾತ್ರ ಹೈದರಾಬಾದ್ ತಂಡ ಗೆದ್ದಿತ್ತು. ಕಳೆದ ವರ್ಷ ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರ ಅವರನ್ನು ಕೋಚ್ ಆಗಿ ಹೈದರಾಬಾದ್ ನೇಮಿಸಿಕೊಂಡಿತ್ತು. ಈ ವರ್ಷ ಅವರನ್ನು ಕೈ ಬಿಟ್ಟು ವೆಟ್ಟೋರಿ ಅವರನ್ನು ನೇಮಿಸಿಕೊಂಡಿದೆ.
* ಆಸ್ಟ್ರೇಲಿಯಾ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡಕ್ಕೆ ಮುಖ್ಯ ಕೋಚ್ ಆಗಿ ಅನುಭವವನ್ನು ವೆಟ್ಟೋರಿ ಹೊಂದಿದ್ದಾರೆ.
ಬುಧವಾರ, 09 ಆಗಸ್ಟ್ 2023
11:21 ಪೂರ್ವಾಹ್ನ
Daily PDF
IPL 2024 : ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನೂತನ ಕೋಚ್ ಆಗಿ ವೆಟ್ಟೋರಿ ನೇಮಕ
Authored by:
Akshata Halli