➤ ಇಟಲಿಯ ಟ್ಯೂರಿನ್ (Turin) ನಗರದಲ್ಲಿ ನಡೆದ 19 ನೇ ಅಂತರರಾಷ್ಟ್ರೀಯ ಅರ್ಥ್ ಸೈನ್ಸ್ ಒಲಿಂಪಿಕ್ (IESO) 2026 ರಲ್ಲಿ ಭಾರತೀಯ ವಿದ್ಯಾರ್ಥಿಗಳ ತಂಡವು ಐತಿಹಾಸಿಕ 9 ಪದಕಗಳನ್ನು (4 ಚಿನ್ನ, 3 ಬೆಳ್ಳಿ, 2 ಕಂಚು) ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಕೇಂದ್ರ ಭೂ ವಿಜ್ಞಾನ ಸಚಿವಾಲಯದ (Ministry of Earth Sciences - MoES) ಸ್ವತಂತ್ರ ಉಸ್ತುವಾರಿ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ನವದೆಹಲಿಯ 'ಪೃಥ್ವಿ ಭವನ'ದಲ್ಲಿ ಪದಕ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಿದರು.
➤ ಪದಕ ವಿಜೇತ ಭಾರತೀಯ ವಿದ್ಯಾರ್ಥಿಗಳು:
1. ಸೌಮಿಕ್ ಮಂಡಲ್ (Soumik Mandal - ಪಶ್ಚಿಮ ಬಂಗಾಳ): ವೈಯಕ್ತಿಕ ಪರೀಕ್ಷೆಗಳಲ್ಲಿ 2 ಚಿನ್ನ ಮತ್ತು 1 ಬೆಳ್ಳಿ ಪದಕ. IESO ನ 19 ವರ್ಷಗಳ ಇತಿಹಾಸದಲ್ಲೇ ಜಾಗತಿಕವಾಗಿ 3 ನೇ ಅತ್ಯುನ್ನತ ರ್ಯಾಂಕ್ ಪಡೆದು ಸಾಧನೆ.
2. ಆರನ್ ಮೈತಿ (Aaron Maiti - ಪಶ್ಚಿಮ ಬಂಗಾಳ): ಅರ್ಥ್ ಸೈನ್ಸ್ ಪ್ರಾಜೆಕ್ಟ್ (ESP) ವಿಭಾಗದಲ್ಲಿ 1 ಚಿನ್ನ ಮತ್ತು 1 ಕಂಚು ಪದಕ.
3. ರಿಧಿ ರಂಜನ್ (Riddhi Ranjan - ಬಿಹಾರ): 1 ಚಿನ್ನ ಮತ್ತು 1 ಬೆಳ್ಳಿ ಪದಕ.
4. ಮೊಹಮ್ಮದ್ ಎಹ್ತೇಶಾಮ್ ರಿಜ್ವಿ (Md Ehtesham Rizvi - ಬಿಹಾರ): 1 ಬೆಳ್ಳಿ ಮತ್ತು 1 ಕಂಚು ಪದಕ.
➤ ಈ ಆಯ್ಕೆ ಪ್ರಕ್ರಿಯೆ:
1. ರಾಷ್ಟ್ರೀಯ ಮಟ್ಟದ ಪರೀಕ್ಷೆ: ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (GSI) ಹಾಗೂ ಭೂ ವಿಜ್ಞಾನ ಸಚಿವಾಲಯದ (MoES) ಬೆಂಬಲದೊಂದಿಗೆ ದೇಶಾದ್ಯಂತ ಸುಮಾರು 17,800 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
2. ತರಬೇತಿ ಶಿಬಿರ: ಆಯ್ಕೆಯಾದ ಟಾಪ್ 25 ವಿದ್ಯಾರ್ಥಿಗಳಿಗೆ ಗುಜರಾತ್‌ನ ಮಹಾರಾಜ ಸಾಯಾಜಿರಾವ್ ವಿಶ್ವವಿದ್ಯಾಲಯ (MSU, Vadodara) ಮತ್ತು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ 3 ವಾರಗಳ ಕಠಿಣ ತರಬೇತಿ ನೀಡಲಾಗಿತ್ತು.
ಶನಿವಾರ, 05 ಸೆಪ್ಟೆಂಬರ್ 2026
10:32 ಪೂರ್ವಾಹ್ನ
Daily PDF
ಅಂತರರಾಷ್ಟ್ರೀಯ ಅರ್ಥ್ ಸೈನ್ಸ್ ಒಲಿಂಪಿಕ್ 2026: ಭಾರತಕ್ಕೆ ಐತಿಹಾಸಿಕ 9 ಪದಕಗಳು!
Authored by:
Akshata Halli