➤ ಭಾರತೀಯ ನೌಕಾಪಡೆಯ ಪ್ರಸಿದ್ಧ ತರಬೇತಿ ನೌಕೆ ಐಎನ್‌ಎಸ್ ಸುದರ್ಶಿನಿ (INS Sudarshini), ತನ್ನ ಐತಿಹಾಸಿಕ 'ಲೋಕಾಯನ-26' (Lokayan 26) ಸುದೀರ್ಘ ಸಮುದ್ರಯಾನದ ಭಾಗವಾಗಿ ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯಾ (Alexandria) ಬಂದರನ್ನು ತಲುಪಿದೆ. ಈ ಮಹತ್ವದ ಯಾನವು ಭಾರತದ ಕಡಲ ಪರಂಪರೆಯನ್ನು ಎತ್ತಿಹಿಡಿಯುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
➤ ಲೋಕಾಯನ-26 (Lokayan 26): ಈ ಸುದೀರ್ಘ ಯಾನವು 2026ರ ಜನವರಿ 20 ರಂದು ಕೇರಳದ ಕೊಚ್ಚಿಯಿಂದ ಪ್ರಾರಂಭವಾಯಿತು.
- ಅವಧಿ ಮತ್ತು ವ್ಯಾಪ್ತಿ: ಇದು 10 ತಿಂಗಳ ಕಾಲ ನಡೆಯುವ ಬೃಹತ್ ಸಮುದ್ರಯಾನವಾಗಿದ್ದು, ಸುಮಾರು 22,000 ನಾಟಿಕಲ್ ಮೈಲಿ ದೂರವನ್ನು ಕ್ರಮಿಸುವ ಗುರಿ ಹೊಂದಿದೆ.
- ತಲುಪುವ ದೇಶಗಳು: ಈ ಯಾನದಲ್ಲಿ ಒಟ್ಟು 13 ದೇಶಗಳ 18 ಪ್ರಮುಖ ಬಂದರುಗಳಿಗೆ ಭೇಟಿ ನೀಡಲಾಗುತ್ತಿದೆ.
- ಮುಖ್ಯ ಉದ್ದೇಶ: ನೌಕಾಪಡೆಯ ಕೆಡೆಟ್‌ಗಳಿಗೆ ಸಾಂಪ್ರದಾಯಿಕ ನೌಕಾಯಾನ, ಸಮುದ್ರಯಾನದ ಕೌಶಲ್ಯ ಮತ್ತು ಸಾಗರ ಸಂಚರಣೆ (Ocean Navigation) ತರಬೇತಿ ನೀಡುವುದು.
➤ ಐಎನ್‌ಎಸ್ ಸುದರ್ಶಿನಿ ವಿಶೇಷತೆ
- ಮೂರು ಕಂಬಗಳ ದೋಣಿ (Three-masted barque): ಐಎನ್‌ಎಸ್ ಸುದರ್ಶಿನಿ ನೌಕಾಪಡೆಯ ತರಬೇತಿಗಾಗಿ ಬಳಸಲಾಗುವ ಸಾಂಪ್ರದಾಯಿಕ ಪಟದೋಣಿಯಾಗಿದೆ (Sail Training Ship).
- ಮಿಷನ್ ವಸುಧೈವ ಕುಟುಂಬಕಂ: ಈ ನೌಕೆಯು ಭಾರತದ ಕಡಲ ಪರಂಪರೆ ಹಾಗೂ ಕಲ್ಚರಲ್ ಡಿಪ್ಲೊಮಸಿಯನ್ನು ಪ್ರತಿಬಿಂಬಿಸುವ "ತೇಲುವ ರಾಯಭಾರಿ" (Floating Ambassador) ಯಾಗಿ ಕಾರ್ಯನಿರ್ವಹಿಸುತ್ತದೆ.
➤ ಯಾನದ ಪ್ರಮುಖ ಹಂತಗಳು
- ಈ ಪ್ರಯಾಣದ ಅವಧಿಯಲ್ಲಿ ಐಎನ್‌ಎಸ್ ಸುದರ್ಶಿನಿ ಅರೇಬಿಯನ್ ಸಮುದ್ರ, ಕೆಂಪು ಸಮುದ್ರ, ಸೂಯೆಜ್ ಕಾಲುವೆ ಹಾಗೂ ಮೆಡಿಟರೇನಿಯನ್ ಸಮುದ್ರಗಳನ್ನು ಯಶಸ್ವಿಯಾಗಿ ದಾಟಿದೆ.
- ಈ ಯಾನದ ಭಾಗವಾಗಿ ಮೇ 27, 2026 ರಂದು ನೌಕೆಯು ಅಂಟಿಗುವಾ ತಲುಪಿ ತನ್ನ ಮೊದಲ ಅಟ್ಲಾಂಟಿಕ್ ಸಾಗರ ದಾಟುವಿಕೆಯನ್ನು (Atlantic Crossing) ಪೂರ್ಣಗೊಳಿಸಿತ್ತು.
ಶುಕ್ರವಾರ, 25 ಸೆಪ್ಟೆಂಬರ್ 2026
3:05 ಅಪರಾಹ್ನ
Daily PDF
'ಲೋಕಾಯನ-26' ಅಭಿಯಾನ: ಈಜಿಪ್ಟ್ನ ಅಲೆಕ್ಸಾಂಡ್ರಿಯಾಗೆ ತಲುಪಿದ ಭಾರತೀಯ ನೌಕಾಪಡೆಯ 'ಐಎನ್‌ಎಸ್ ಸುದರ್ಶಿನಿ'
Authored by:
Akshata Halli