➤ ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT Delhi) ಯ ಸಂಶೋಧಕರು ಭಾರತದ ಮೊದಲ ಕಾರ್ಯನಿರ್ವಹಿಸಬಲ್ಲ ಸ್ವದೇಶಿ 'ಮೈಕ್ರೋ-GPU' (micro-GPU) ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ.
- ತಂಡದ ನೇತೃತ್ವ: ಪ್ರೊ. ಜಯದೇವ್ ಮತ್ತು ಪ್ರೊ. ಕೌಶಿಕ್ ಸಹಾ (ಮಾರ್ಗದರ್ಶಕರು), ನಮ್ಮಿ ಆಕಾಶ್ ಮತ್ತು ಎಂ. ರವಿ ತೇಜ (M.Tech ವಿದ್ಯಾರ್ಥಿಗಳು)
- ಬಳಸಿದ ಹಾರ್ಡ್‌ವೇರ್ ವೇದಿಕೆ: Spartan-7 FPGA (Field Programmable Gate Array)
- ಮುಂದಿನ ಗುರಿ: 8-16 ಕೋರ್ ವೆಕ್ಟರ್-ಸ್ಟೈಲ್ ಪ್ರೊಸೆಸರ್ ಹಾಗೂ 65nm ಚಿಪ್ ಪ್ರಕ್ರಿಯೆ
➤ 'ಮೈಕ್ರೋ-GPU': GPU (Graphics Processing Unit) ಎಂಬುದು ಕಂಪ್ಯೂಟರ್ ಅಥವಾ ಮೊಬೈಲ್ ಸಾಧನಗಳಲ್ಲಿ ಗ್ರಾಫಿಕ್ಸ್, ಚಿತ್ರಗಳು ಹಾಗೂ ವೀಡಿಯೊಗಳನ್ನು ಪ್ರಕ್ರಿಯೆಗೊಳಿಸಲು (Process) ಬಳಸುವ ಚಿಪ್ ಆಗಿದೆ. IIT ದೆಹಲಿ ಅಭಿವೃದ್ಧಿಪಡಿಸಿದ ಈ 'ಮೈಕ್ರೋ-GPU' ಎಂಬುದು ಸಾಂಪ್ರದಾಯಿಕ ದೊಡ್ಡ ಹೈ-ಎಂಡ್ GPU ಗಿಂತ ಗಾತ್ರದಲ್ಲಿ ಸಣ್ಣದಾಗಿದ್ದು, ಕಡಿಮೆ ವೆಚ್ಚದ ಮತ್ತು ಸಣ್ಣ ಪ್ರಮಾಣದ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಪೋಗ್ರಾಮಬಲ್ ಗ್ರಾಫಿಕ್ಸ್ ಪ್ರೊಸೆಸರ್ ಆಗಿದೆ. ಇದನ್ನು RTL (Register Transfer Language) ನಲ್ಲಿ ವಿನ್ಯಾಸಗೊಳಿಸಲಾಗಿದೆ.
➤ ಇದರ ಪ್ರಮುಖ ಬಳಕೆಗಳು (Applications): ಸಾಮಾನ್ಯವಾಗಿ ಗೇಮಿಂಗ್ ಅಥವಾ ದೊಡ್ಡ ಕಂಪ್ಯೂಟರ್‌ಗಳಿಗೆ ಬಳಸುವ GPUಗಳಿಗಿಂತ ಭಿನ್ನವಾಗಿ, ಈ ಮೈಕ್ರೋ-GPU ಅನ್ನು ಭಾರತದ ದೈನಂದಿನ ಹಾಗೂ ಸಣ್ಣ ಪ್ರಮಾಣದ ತಾಂತ್ರಿಕ ಅಗತ್ಯಗಳಿಗೆ ಬಳಸಬಹುದು:

  1. ಇ-ರಿಕ್ಷಾ ಡ್ಯಾಶ್‌ಬೋರ್ಡ್‌ಗಳು: ಇ-ರಿಕ್ಷಾಗಳಲ್ಲಿ ನ್ಯಾವಿಗೇಷನ್ ಮತ್ತು ಮಾಹಿತಿ ಪ್ರದರ್ಶನ ವ್ಯವಸ್ಥೆಗೆ.
  2. ಕೈಗಾರಿಕಾ ಡಿಸ್‌ಪ್ಲೇಗಳು: ಕೈಗಾರಿಕೆಗಳಲ್ಲಿ ಬಳಸುವ 'ಹ್ಯೂಮನ್-ಮೆಷಿನ್ ಇಂಟರ್‌ಫೇಸ್' (HMI) ಸಾಧನಗಳಿಗೆ.
  3. ಸಣ್ಣ ದೋಣಿಗಳ ನ್ಯಾವಿಗೇಶನ್: ಸಣ್ಣ ಮೀನುಗಾರಿಕಾ ದೋಣಿಗಳಿಗೆ ಅಗತ್ಯವಿರುವ ಡಿಜಿಟಲ್ ನ್ಯಾವಿಗೇಶನ್ ಟರ್ಮಿನಲ್‌.
  4. ಇ-ಬುಕ್ ರೀಡರ್‌ಗಳು: ಶಿಕ್ಷಣ ಕ್ಷೇತ್ರದಲ್ಲಿ ಬಳಸುವ ಡಿಜಿಟಲ್ ಇ-ಬುಕ್ ಸಾಧನಗಳ ಡಿಸ್‌ಪ್ಲೇ ತಂತ್ರಜ್ಞಾನಕ್ಕಾಗಿ.