* ಖ್ಯಾತ ಲೇಖಕಿ ಮತ್ತು ಲೋಕೋಪಕಾರಿ, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರಿಗೆ ಕೆನಡಾ ಇಂಡಿಯಾ ಫೌಂಡೇಶನ್ ಗ್ಲೋಬಲ್ ಇಂಡಿಯನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
* ಇನ್ಫೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿಯವರಿಗೆ 'ಗ್ಲೋಬಲ್ ಇಂಡಿಯನ್ ಪ್ರಶಸ್ತಿ' ಪ್ರದಾನ ಮಾಡಲು ಅವರು ತಮ್ಮ ಇಡಿ ವೃತ್ತಿಜೀವನದಲ್ಲಿ ಭವಿಷ್ಯದ ಪೀಳಿಗೆಯು ಯಶಸ್ಸನ್ನು ಕಂಡುಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ ಎಂದು ಕೆನಡಾ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಸತೀಶ್ ಠಕ್ಕ ಅವರು ತಿಳಿಸಿದರು.
* ಗ್ಲೋಬಲ್ ಇಂಡಿಯನ್ ಪ್ರಶಸ್ತಿಯನ್ನು $50,000 ಮೌಲ್ಯದ ಗ್ಲೋಬಲ್ ಇಂಡಿಯನ್ ಪ್ರಶಸ್ತಿಯನ್ನು ವಾರ್ಷಿಕವಾಗಿ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರಮುಖ ಭಾರತೀಯರಿಗೆ ನೀಡಲಾಗುತ್ತದೆ.
* ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಗೌರವದ ವಿಷಯವಾಗಿದೆ' ಎಂದು ಸುಧಾ ಮೂರ್ತಿ ಅವರು ತಿಳಿಸಿದರು.
ಗುರುವಾರ, 05 ಅಕ್ಟೋಬರ್ 2023
11:15 ಪೂರ್ವಾಹ್ನ
Daily PDF
ಇನ್ಫೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿಯವರಿಗೆ 'ಗ್ಲೋಬಲ್ ಇಂಡಿಯನ್ ಪ್ರಶಸ್ತಿ' ಪ್ರದಾನ
Authored by:
Bhagya R K