* ಯುರೋಪ್ ಖಂಡದ ಅತಿ ದೊಡ್ಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕನೇ ಪ್ರಶಸ್ತಿಯನ್ನು ಗೆದ್ದ ಬಳಿಕ ಸ್ಪೇನ್ ತಂಡವು, ಜುಲೈ 14ರ ತಡರಾತ್ರಿ ಬರ್ಲಿನ್‌ನಲ್ಲಿ ನಡೆದ 2024ರ ಯುರೋ ಫೈನಲ್ ಪಂದ್ಯದಲ್ಲಿ UEFA ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಂತ ಯಶಸ್ವಿ ರಾಷ್ಟ್ರವಾಗಿ ದಾಖಲೆಯನ್ನು ಸೃಷ್ಟಿಸಿತು.
* ಪಂದ್ಯದ ಆರಂಭದಿಂದ ಪ್ರಾಬಲ್ಯ ಮೆರೆದ ಸ್ಪೇನ್ ತಂಡವು ಇಂಗ್ಲೆಂಡ್ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವಿನ ನಗೆ ಬೀರಿತು.
* 1964 ಮತ್ತು 2008ರಲ್ಲಿ ಚಾಂಪಿಯನ್ ಆಗಿದ್ದ ಸ್ಪೇನ್ ಕೊನೆಯ ಬಾರಿ ಯುರೊ ಕೂಟ ಗೆದ್ದಿದ್ದು. 2012ರಲ್ಲಿ ಆ ಬಾರಿ ಇಟಲಿ ಮೇಲೆ ಜಯಗಳಿಸಿ ಮೂರನೇ ಬಾರಿ ಚಾಂಪಿಯನ್ ಆಗಿತ್ತು. ಇಂಗ್ಲೆಂಡ್ 2021ರಲ್ಲಿ ನಡೆದ ಯುರೊ ಫೈನಲ್ ತಲುಪಿತ್ತು. ಆದರೆ ಶೂಟೌಟ್‌ನಲ್ಲಿ ಇಟಲಿಗೆ ಮಣಿದಿತ್ತು.
* 47ನೇ ನಿಮಿಷದಲ್ಲಿ ಸ್ಪೇನ್‌ನ ನಿಕೊ ವಿಲಿಯಮ್ಸ್ ಆರಂಭಿಕ ಗೋಲು ಗಳಿಸಿದರೆ, ಇಂಗ್ಲೆಂಡ್‌ನ ಕೋಲ್ ಪಾಮರ್ ಇಂಗ್ಲೆಂಡ್ ತಂಡಕ್ಕೆ ಗೋಲು ಗಳಿಸಿ ಸಮಬಲ ಸಾಧಿಸಲು ನೆರವಾದರು. ಅಂತಿಮ ಹಂತದ 86ನೇ ನಿಮಿಷದಲ್ಲಿ ಮೈಕೆಲ್ ಒಯಾರ್ಜಾಬಲ್ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಗೆಲುವು ತಂದುಕೊಟ್ಟರು.
* ಈ ಗೆಲುವಿನೊಂದಿಗೆ ಸ್ಪೇನ್ ತಂಡ ನಾಲ್ಕನೇ ಯುರೋ ಪ್ರಶಸ್ತಿಯನ್ನು ಗೆದ್ದು ಜರ್ಮನಿಗಿಂತ ಮುಂದಿದೆ. ಇದು ಕಳೆದ ಐದು ಆವೃತ್ತಿಗಳಲ್ಲಿ ಸ್ಪೇನ್‌ಗೆ ಮೂರನೇ ಯುರೋ ಪ್ರಶಸ್ತಿಯಾಗಿದೆ. 2012ರಲ್ಲಿ ಯುರೋ ಗೆದ್ದ ನಂತರ ಸ್ಪೇನ್‌ಗೆ ಯುರೋಪಿಯನ್ ವಿಜಯೋತ್ಸವದ ವೈಭವವು 12 ವರ್ಷಗಳ ನಂತರ ಬಂದಿದೆ.
* ಅತ್ಯಂತ ಹೆಚ್ಚು ಯೂರೋ ಕಪ್ ಪ್ರಶಸ್ತಿ ಪಡೆದ ದೇಶಗಳಲ್ಲಿ 4 ಗೆಲುವಿನೊಂದಿಗೆ ಸ್ಪೇನ್ ಮೊದಲ ಸ್ಥಾನದಲ್ಲಿದೆ. ಮೂರು ಬಾರಿ ಜಯಗಳಿಸಿರುವ ಜರ್ಮನಿ ಎರಡನೇ ಸ್ಥಾನದಲ್ಲಿದೆ. ಇಟಲಿ ಮತ್ತು ಫ್ರಾನ್ಸ್ ತಲಾ ಎರಡು ಬಾರಿ ಗೆದ್ದಿದ್ದರೆ, ರಷ್ಯಾ, ಜೆಕ್ ರಿಪಬ್ಲಿಕ್, ಪೋರ್ಚುಗಲ್ , ಸ್ಲೋವಾಕಿಯಾ, ಡೆನ್ಮಾರ್ಕ್,ನೆದರ್ಲ್ಯಾಂಡ್ಸ್ ಗ್ರೀಸ್ ತಲಾ ಒಮ್ಮೆ ಯೂರೋ ಕಪ್ ಗೆದ್ದಿವೆ.
ಸೋಮವಾರ, 15 ಜುಲೈ 2024
4:12 ಅಪರಾಹ್ನ
Daily PDF
ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ; 4ನೇ ಬಾರಿಗೆ ಯುರೋ ಪ್ರಶಸ್ತಿ ಗೆದ್ದ ಸ್ಪೇನ್
Authored by:
Jyoti Angadi