* ಅರ್ಜೆಂಟೀನಾ ತಂಡ ಸತತ ಎರಡನೇ ಬಾರಿಗೆ ಕೋಪಾ ಅಮೆರಿಕ ಚಾಂಪಿಯನ್ ಎನಿಸಿದೆ. ಇದರೊಂದಿಗೆ ದಾಖಲೆಯ 16ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. 
* ಜುಲೈ 15 ರಂದು (ಸೋಮವಾರ) ನಡೆದ ಫೈನಲ್ ಪಂದ್ಯದಲ್ಲಿ ಲೌಟರೊ ಮಾರ್ಟಿನೆಜ್ (112ನೇ ನಿಮಿಷ) ಸಿಡಿಸಿದ ಏಕೈಕ ಗೋಲಿನ ಬಲದಿಂದ ಅರ್ಜೆಂಟೀನಾ 1-0 ಗೋಲುಗಳ ಅಂತರದಿಂದ ಕೊಲಂಬಿಯಾ ಅನ್ನು ಹಿಂದಿಕ್ಕಿದೆ.
* ಲಿಯೋನೆಲ್ ಮೆಸ್ಸಿ ಕೋಪಾ ಅಮೆರಿಕ ಟೂರ್ನಿಗೆ ಗೆಲುವಿನ ವಿದಾಯ ತಿಳಿಸಿದ್ದಾರೆ.
* ಪ್ಲೋರಿಡಾದ ಮಿಯಾಮಿ ಗಾರ್ಡನ್ಸ್‌ ನಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಕೋಪಾ ಅಮೆರಿಕ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅರ್ಜೆಂಟಿನಾ ತಂಡವು ಕೊಲಂಬಿಯಾ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಸತತ ಮೂರು ಟ್ರೋಫಿ ಗೆದ್ದ ದಾಖಲೆ ಬರೆದಿದೆ. 
* ಅರ್ಜೆಂಟೀನಾ ತಂಡವು ಸತತ 2021ರ ಕೋಪಾ ಅಮೆರಿಕ, 2022ರ ಫಿಫಾ ವಿಶ್ವಕಪ್ ಹಾಗೂ 2024ರ ಕೊಪಾ ಅಮೆರಿಕ ಟ್ರೋಫಿ ಗೆದ್ದಿದೆ.
* ಅರ್ಜೆಂಟೀನಾ ತಂಡ ಗೆದ್ದ ಬಹುಮಾನ : 133.66 ಕೋಟಿ 
* ಕೊಲಂಬಿಯಾ ತಂಡ ಗೆದ್ದ ಬಹುಮಾನ : 58.47 ಕೋಟಿ 
* ಹೆಚ್ಚು ಬಾರಿ ಕೊಪಾ ಪ್ರಶಸ್ತಿ ಗೆದ್ದವರು
ಅರ್ಜೆಂಟೀನಾ ಪ್ರಶಸ್ತಿಗಳು 16
ಉರುಗೈ ಪ್ರಶಸ್ತಿಗಳು 15
ಬ್ರೆಜಿಲ್ ಪ್ರಶಸ್ತಿಗಳು 9
ಚಿಲಿ ಪ್ರಶಸ್ತಿಗಳು 2
ಪೆಗುಗ್ವೆ ಪ್ರಶಸ್ತಿಗಳು 2
ಪೆರು ಪ್ರಶಸ್ತಿಗಳು 2