* ವಿಶ್ವಕಪ್ (World Cup 2023) ಮಹಾಸಮರಕ್ಕೆ ಇಂದಿನಿಂದ ಅಂದರೆ ಅಕ್ಟೋಬರ್ 5 ರಿಂದ (ಗುರುವಾರ) ಅಧಿಕೃತ ಚಾಲನೆ ಸಿಗಲಿದ್ದು, ಪ್ರಶಸ್ತಿಗಾಗಿ 10 ತಂಡಗಳು ಪೈಪೋಟಿ ನಡೆಸಲಿವೆ. ಇಂದಿನಿಂದ ಅಕ್ಟೋಬರ್ 5 ರಿಂದ ನವೆಂಬರ್ 19 ರ ವರೆಗೆ ವಿಶ್ವಕಪ್ ಕದನ ನಡೆಯಲಿದೆ.
* 6 ಬಾರಿ ವಿಶ್ವಕಪ್ ಪ್ರತಿನಿಧಿಸಿರುವ ಭಾರತದ ಮಾಜಿ ಕ್ರಿಕೆಟರ್, ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ 2023ರ ವಿಶ್ವಕಪ್ ಟ್ರೋಫಿಯೊಂದಿಗೆ ಕ್ರೀಡಾಂಗಣಕ್ಕೆ ಎಂಟ್ರಿ ಕೊಡಲಿದ್ದಾರೆ. ಈ ವೇಳೆ ಎಲ್ಲಾ 10 ತಂಡದ ನಾಯಕರು ಉಪಸ್ಥಿತರಿಲಿದ್ದಾರೆ. ಈ ಮೂಲಕ ವಿಶ್ವಕಪ್ ಸಮರಕ್ಕೆ ಅಧಿಕೃತ ಚಾಲನೆ ಸಿಗಲಿದೆ.
* ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ಟೀಂ ನ್ಯೂಜಿಲೆಂಡ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
* ಸಾಕಷ್ಟು ನಿರೀಕ್ಷೆಗಳು, ಟೀಂ ಇಂಡಿಯಾ, ಅಕ್ಟೋಬರ್ 8 ರಂದು ವಿಶ್ವಕಪ್‌ನ ಮೊದಲ ಪಂದ್ಯವನ್ನ ಆಸೀಸ್ ವಿರುದ್ಧ ಆಡಲಿದೆ. ಯುವ ಹಾಗೂ ಅನುಭವಿ ಆಟಗಾರರನ್ನೇ ಹೊಂದಿರುವ ಭಾರತ, ಎಲ್ಲಾ ವಿಭಾಗಗಳಲ್ಲೂ ಸಮರ್ಥ ಆಟಗಾರರನ್ನ ಹೊಂದಿದೆ.
* ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್, ಶುಭಮನ್ ಗಿಲ್, ಪಾಂಡ್ಯ, ಜಡೇಜಾ, ಬೂಮ್ರಾ, ಸಿರಾಜ್, ಇಶಾನ್ ಕಿಶನ್, ಶಮಿ, ಅಶ್ವಿನ್, ಸೂರ್ಯಕುಮಾರ್ ಯಾದವ್ ಸೇರಿದಂತೆ 15 ಜನರ ತಂಡವನ್ನ ಅಳೆದುತೂಗಿ ಕಟ್ಟಲಾಗಿದ್ದು, ಗೆಲ್ಲುವ ನೆಚ್ಚಿನ ತಂಡವಾಗಿದೆ.
ಶುಕ್ರವಾರ, 06 ಅಕ್ಟೋಬರ್ 2023
8:41 ಅಪರಾಹ್ನ
Daily PDF
ಇಂದಿನಿಂದ ಕ್ರಿಕೆಟ್ ವಿಶ್ವ ಸಮರ ಇಂಗ್ಲೆಂಡ್ ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯ
Authored by:
Bhagya R K