➤ HICDP :High Impact Community Development Projects (ಉನ್ನತ ಪ್ರಭಾವ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳು).
- ಆರಂಭ: 2003 ರ ನವೆಂಬರ್‌ನಲ್ಲಿ ಭಾರತ ಸರ್ಕಾರವು ನೇಪಾಳದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತು (ಹಿಂದೆ ಇದನ್ನು Small Development Projects ಎಂದು ಕರೆಯಲಾಗುತ್ತಿತ್ತು).
- ಉದ್ದೇಶ: ನೇಪಾಳದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ನೈರ್ಮಲ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸ್ಥಳೀಯ ಮಟ್ಟದ ಅಭಿವೃದ್ಧಿಗೆ ನೆರವಾಗುವುದು.
- ಒಟ್ಟು ಯೋಜನೆಗಳು: 2003 ರಿಂದೀಚೆಗೆ ಭಾರತವು ನೇಪಾಳದಲ್ಲಿ 590ಕ್ಕೂ ಹೆಚ್ಚು HICDP ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, 500ಕ್ಕೂ ಹೆಚ್ಚು ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
➤ ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧ:
- ಭಾರತ ಹಾಗೂ ನೇಪಾಳ 'ಶಾಂತಿ ಮತ್ತು ಮೈತ್ರಿ ಒಪ್ಪಂದ' (Treaty of Peace and Friendship - 1950) ಗೆ ಸಹಿ ಹಾಕಿವೆ.
- ಭಾರತವು ನೇಪಾಳದಲ್ಲಿ ಶಾಲೆಗಳು, ಆಸ್ಪತ್ರೆಗಳು, ರೈಲು ಮಾರ್ಗಗಳು ಮತ್ತು ಭೂಕಂಪನ ಪುನರ್ನಿರ್ಮಾಣ ಯೋಜನೆಗಳಿಗೆ ಹೆಚ್ಚಿನ ಆರ್ಥಿಕ ಸಹಾಯಧನ (Grant Assistance) ಒದಗಿಸುತ್ತಾ ಬಂದಿದೆ.