➤ ಭಾರತವು ಜಾಗತಿಕ ದೂರಸಂಪರ್ಕ ಮತ್ತು ಡಿಜಿಟಲ್ ಸಂಪರ್ಕ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಕತಾರ್ನ ದೋಹಾದಲ್ಲಿ ನಡೆದ ITU ಪೂರ್ಣಾಧಿಕಾರಿ ಸಮ್ಮೇಳನದಲ್ಲಿ (Plenipotentiary Conference), ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ITU) ಮಂಡಳಿಗೆ 2027-2030ರ ಅವಧಿಗೆ ಭಾರತವು ಅಧಿಕೃತವಾಗಿ ಮರುಆಯ್ಕೆಯಾಗಿದೆ.
- ಅವಧಿ (Term): 2027–2030
- ಸ್ಥಳ: ದೋಹಾ, ಕತಾರ್ (ITU Plenipotentiary Conference 2026)
- ಪಡೆದ ಮತಗಳು: ಭಾರತವು ಏಷ್ಯಾ ಮತ್ತು ಆಸ್ಟ್ರಲಾಸಿಯಾ (Region E) ಪ್ರದೇಶದಿಂದ ಸ್ಪರ್ಧಿಸಿ ಒಟ್ಟು 151 ಮತಗಳನ್ನು ಪಡೆಯುವ ಮೂಲಕ 3ನೇHighest ಸ್ಥಾನದೊಂದಿಗೆ ಜಯ ಸಾಧಿಸಿದೆ.
- ITU ಮಂಡಲಿಯ ಒಟ್ಟು ಸದಸ್ಯರು: 48 ಸದಸ್ಯ ರಾಷ್ಟ್ರಗಳು.
➤ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU):
- ಸ್ಥಾಪನೆ: 1865ರಲ್ಲಿ ಪ್ಯಾರಿಸ್ನಲ್ಲಿ 'ಅಂತರರಾಷ್ಟ್ರೀಯ ಟೆಲಿಗ್ರಾಫ್ ಯೂನಿಯನ್' (International Telegraph Union) ಆಗಿ ಸ್ಥಾಪನೆಯಾಯಿತು.
- ವಿಶೇಷತೆ: ಇದು ವಿಶ್ವಸಂಸ್ಥೆಯ (UN) ಅತ್ಯಂತ ಹಳೆಯ ವಿಶೇಷ ಏಜೆನ್ಸಿಯಾಗಿದೆ. 1947ರಲ್ಲಿ ಇದು ವಿಶ್ವಸಂಸ್ಥೆಯ ಅಧಿಕೃತ ವಿಶೇಷ ಏಜೆನ್ಸಿಯಾಯಿತು.
- ಪ್ರಧಾನ ಕಚೇರಿ: ಜಿನೀವಾ, ಸ್ವಿಟ್ಜರ್ಲ್ಯಾಂಡ್.
- ಸದಸ್ಯರು: 194 ಸದಸ್ಯ ರಾಷ್ಟ್ರಗಳು ಹಾಗೂ ಸುಮಾರು 1,000ಕ್ಕೂ ಹೆಚ್ಚು ಕಂಪನಿಗಳು, ವಿಶ್ವವಿದ್ಯಾಲಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಇದರ ಸದಸ್ಯರಾಗಿವೆ.
- ಪ್ರಮುಖ ಕಾರ್ಯಗಳು: ಜಾಗತಿಕ ರೇಡಿಯೋ ಸ್ಪೆಕ್ಟ್ರಮ್ ನಿರ್ವಹಣೆ, ಉಪಗ್ರಹ ಕಕ್ಷೆಗಳ ಸಮನ್ವಯ, ಅಂತರರಾಷ್ಟ್ರೀಯ ತಾಂತ್ರಿಕ ಮಾನದಂಡಗಳ (Standards) ರೂಪಿಸುವಿಕೆ ಮತ್ತು ಡಿಜಿಟಲ್ ಸಂಪರ್ಕವನ್ನು ಉತ್ತೇಜಿಸುವುದು.
➤ ITU ಮಂಡಳಿಯ (ITU Council) ಪಾತ್ರ:
- ಪೂರ್ಣಾಧಿಕಾರಿ ಸಮ್ಮೇಳನಗಳ ನಡುವಿನ ಮಧ್ಯಂತರ ಅವಧಿಯಲ್ಲಿ ITU ನ ಆಡಳಿತ ಮಂಡಳಿಯಾಗಿ (Governing Body) ಈ ಕೌನ್ಸಿಲ್ ಕಾರ್ಯನಿರ್ವಹಿಸುತ್ತದೆ.
- ಇದು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಸಭೆ ಸೇರಿ ಸಂಸ್ಥೆಯ ಸಾಮಾನ್ಯ ನೀತಿಗಳು, ಕಾರ್ಯತಂತ್ರಗಳು (Strategies) ಮತ್ತು ಹಣಕಾಸು ಯೋಜನೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
➤ ಈ ಮರುಆಯ್ಕೆಯ ಮಹತ್ವ:
1. ಜಾಗತಿಕ ವಿಶ್ವಾಸ: ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಮಾತನಾಡಿ, ಈ ಭರ್ಜರಿ ವಿಜಯವು ಭಾರತದ ಬೆಳೆಯುತ್ತಿರುವ ತಾಂತ್ರಿಕ ಸಾಮರ್ಥ್ಯ ಹಾಗೂ ಜಾಗತಿಕ ಡಿಜಿಟಲ್ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಮೇಲಿರುವ ಅಂತರರಾಷ್ಟ್ರೀಯ ಸಮುದಾಯದ ಅಚಲ ವಿಶ್ವಾಸವನ್ನು ಬಿಂಬಿಸುತ್ತದೆ ಎಂದಿದ್ದಾರೆ.
2. ಡಿಜಿಟಲ್ ಸಾರ್ವಜನಿಕ ಮೂಲಭೂತ ಸೌಕರ್ಯ (DPI): ಭಾರತವು ತನ್ನ ಮೊಬೈಲ್ ಸಂಪರ್ಕ ಮತ್ತು ಡಿಜಿಟಲ್ ಕ್ರಾಂತಿಯ ಮೂಲಕ ಆಡಳಿತದಲ್ಲಿ ತಂದಿರುವ ಪಾರದರ್ಶಕತೆಯನ್ನು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳಲು ಇದು ದೊಡ್ಡ ವೇದಿಕೆಯಾಗಿದೆ.
3. ಗ್ಲೋಬಲ್ ಸೌತ್ ಧ್ವನಿ: ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳು, ಕೈಗೆಟುಕುವ ದರದಲ್ಲಿ ಡಿಜಿಟಲ್ ಸೇವೆಗಳು ಮತ್ತು ಸಬಲೀಕರಣದ ವಿಚಾರಗಳನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿಡಲು ಭಾರತಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ.
ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ITU) ಮಂಡಳಿಗೆ 2027-2030ರ ಅವಧಿಗೆ ಭಾರತ ಮರು ಆಯ್ಕೆ
Published by Akshata Halli
1 hour ago