➤ ಭಾರತ ಮತ್ತು ನೇಪಾಳದ ನಡುವಿನ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಉತ್ತರಾಖಂಡದ 'ಲಿಪುಲೇಖ್ ಪಾಸ್' (Lipulekh Pass) ಮೂಲಕ ಭಾರತವು ಕೈಲಾಸ ಮಾನಸ ಸರೋವರ ಯಾತ್ರೆಯನ್ನು ನಡೆಸಲು ಮುಂದಾಗಿರುವುದಕ್ಕೆ ನೇಪಾಳವು ತೀವ್ರ ಅಕ್ಷೇಪ ವ್ಯಕ್ತಪಡಿಸಿದೆ. ಈ ಪ್ರದೇಶವು ತನ್ನದೇ ಎಂದು ನೇಪಾಳ ಪ್ರತಿಪಾದಿಸುತ್ತಿದ್ದರೆ, ಭಾರತವು ಇದನ್ನು ಐತಿಹಾಸಿಕವಾಗಿ ತನ್ನ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ.
➤ ವಿವಾದದ ಹಿನ್ನೆಲೆ : ಇತ್ತೀಚೆಗೆ ನೇಪಾಳ ಸರ್ಕಾರವು ಲಿಪುಲೇಖ್ ಪಾಸ್ ಮೇಲಿನ ತನ್ನ ಪ್ರಾದೇಶಿಕ ಹಕ್ಕನ್ನು ಪುನರುಚ್ಚರಿಸಿದೆ. ನೇಪಾಳದ ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಸಸ್ಮಿತ್ ಪೊಖಾರೆಲ್ ಅವರು, "ಲಿಪುಲೇಖ್ ಪಾಸ್ ನೇಪಾಳಕ್ಕೆ ಸೇರಿದ್ದು, ಈ ಬಗ್ಗೆ ನಾವು ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ.
➤ ಭಾರತದ ಖಡಕ್ ಪ್ರತಿಕ್ರಿಯೆ: ನೇಪಾಳದ ಆಕ್ಷೇಪಣೆಯನ್ನು ತಳ್ಳಿಹಾಕಿರುವ ಭಾರತ ಸರ್ಕಾರ, ಲಿಪುಲೇಖ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ನಡೆದುಕೊಂಡು ಬರುತ್ತಿರುವುದು ಇಂದಿನದಲ್ಲ, ಇದು 1954ರಿಂದಲೂ ಅಸ್ತಿತ್ವದಲ್ಲಿದೆ ಎಂದು ನೆನಪಿಸಿದೆ.
- ಹಳೆಯ ಮಾರ್ಗ: ಲಿಪುಲೇಖ್ ಮಾರ್ಗವು ಅತ್ಯಂತ ಪುರಾತನವಾದದ್ದು ಮತ್ತು ಇದು ಭಾರತದ ಉತ್ತರಾಖಂಡ ರಾಜ್ಯದ ಭಾಗವಾಗಿದೆ.
- ಅಭಿವೃದ್ಧಿ: ಈ ಭಾಗದಲ್ಲಿ ರಸ್ತೆ ಸಂಪರ್ಕ ಸುಧಾರಿಸುವುದು ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ ಎಂದು ಭಾರತ ಹೇಳಿದೆ.
➤ ಸುಗೌಲಿ ಒಪ್ಪಂದ : ಭಾರತ ಮತ್ತು ನೇಪಾಳದ ನಡುವಿನ ಗಡಿ ವಿವಾದವು 1816ರ 'ಸುಗೌಲಿ ಒಪ್ಪಂದ'ಕ್ಕೆ ಹೋಗಿ ತಲುಪುತ್ತದೆ.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳ ರಾಜರ ನಡುವೆ ನಡೆದ ಈ ಒಪ್ಪಂದದ ಪ್ರಕಾರ, 'ಕಾಳಿ ನದಿ'ಯನ್ನು ಪಶ್ಚಿಮ ಗಡಿಯಾಗಿ ಗುರುತಿಸಲಾಗಿದೆ. ಆದರೆ, ಕಾಳಿ ನದಿಯ ಮೂಲ ಯಾವುದು ಎಂಬ ಬಗ್ಗೆ ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯವಿದೆ. ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶಗಳು ಈ ನದಿಯ ಮೂಲಕ್ಕೆ ಹತ್ತಿರದಲ್ಲಿರುವುದರಿಂದ, ಇವುಗಳನ್ನು ತನ್ನ ನಕ್ಷೆಯಲ್ಲಿ ಸೇರಿಸಲು ನೇಪಾಳ ಪ್ರಯತ್ನಿಸುತ್ತಿದೆ.
➤ ಕೈಲಾಸ ಮಾನಸ ಸರೋವರ ಯಾತ್ರೆ: ಲಿಪುಲೇಖ್ ಪಾಸ್ ಮೂಲಕ ಯಾತ್ರೆ ಕೈಗೊಳ್ಳುವುದು ಯಾತ್ರಾರ್ಥಿಗಳಿಗೆ ಕಡಿಮೆ ಸಮಯದಲ್ಲಿ ಮತ್ತು ಸುಲಭವಾಗಿ ಗುರಿ ತಲುಪಲು ಸಹಕಾರಿಯಾಗಿದೆ. ಚೀನಾದ ನಿಯಂತ್ರಣದಲ್ಲಿರುವ ಟಿಬೆಟ್‌ನ ಕೈಲಾಸ ಪರ್ವತಕ್ಕೆ ಹೋಗಲು ಇದು ಪ್ರಮುಖ ಹೆಬ್ಬಾಗಿಲಾಗಿದೆ.
➤ ಭಾರತ ಮತ್ತು ನೇಪಾಳ ದಶಕಗಳಿಂದಲೂ ಉತ್ತಮ ಬಾಂಧವ್ಯ ಹೊಂದಿವೆ. "ರೋಟಿ-ಬೇಟಿ" ಸಂಬಂಧ ಹೊಂದಿರುವ ಈ ಎರಡು ರಾಷ್ಟ್ರಗಳು ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದು ಉಭಯ ದೇಶಗಳ ಹಿತದೃಷ್ಟಿಯಿಂದ ಅಗತ್ಯವಾಗಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.