➤ ‘ಅವಿಕ್ಲಿ’ (Awiqli) ಇನ್ಸುಲಿನ್: ಇದು ವಿಶ್ವದ ಮೊದಲ ಒನ್ಸ್-ವೀಕ್ಲಿ ಬಾಸಲ್ ಇನ್ಸುಲಿನ್ (Once-weekly basal insulin icodec) ಆಗಿದೆ. ಸಾಮಾನ್ಯವಾಗಿ ಮಧುಮೇಹ (Diabetes) ಇರುವ ರೋಗಿಗಳು ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದು (Injections) ತೆಗೆದುಕೊಳ್ಳಬೇಕಾಗುತ್ತದೆ. ಆದರೆ ‘ಅವಿಕ್ಲಿ’ ಬಳಕೆಯಿಂದ ವಾರಕ್ಕೆ ಕೇವಲ ಒಂದು ಬಾರಿ ಮಾತ್ರ ಇನ್ಸುಲಿನ್ ತಗೆದುಕೊಂಡರೆ ಸಾಕಾಗುತ್ತದೆ.
-
ಚುಚ್ಚುಮದ್ದುಗಳ ಸಂಖ್ಯೆಯಲ್ಲಿ ಇಳಿಕೆ: ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುವ ರೋಗಿಗಳು ವರ್ಷಕ್ಕೆ ಸುಮಾರು 365 ಚುಚ್ಚುಮದ್ದುಗಳನ್ನು ಚುಚ್ಚಿಸಿಕೊಳ್ಳಬೇಕಾಗುತ್ತದೆ. ಆದರೆ ‘ಅವಿಕ್ಲಿ’ ಇನ್ಸುಲಿನ್‌ನಿಂದಾಗಿ ಈ ಸಂಖ್ಯೆ ವರ್ಷಕ್ಕೆ ಕೇವಲ 52 ಕ್ಕೆ ಇಳಿಕೆಯಾಗುತ್ತದೆ. ಇದು ರೋಗಿಗಳ ದೈಹಿಕ ಮತ್ತು ಮಾನಸಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
-
ಅನುಮೋದನೆ: ಭಾರತದ ಔಷಧ ನಿಯಂತ್ರಣ ಸಂಸ್ಥೆಯಾದ CDSCO (Central Drugs Standard Control Organisation) ಈ ಇನ್ಸುಲಿನ್ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ.
-
ಯಾರಿಗೆ ಉಪಯುಕ್ತ?: ಇದನ್ನು ಟೈಪ್-2 ಮಧುಮೇಹ (Type-2 Diabetes) ಹೊಂದಿರುವ ವಯಸ್ಕರ ಚಿಕಿತ್ಸೆಗಾಗಿ ಪ್ರಮುಖವಾಗಿ ಶಿಫಾರಸು ಮಾಡಲಾಗಿದೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ