➤ ತಮಿಳುನಾಡಿನ ಕಲ್ಪಾಕಂನಲ್ಲಿರುವ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರದ (IGCAR) ಫಾಸ್ಟ್ ಬ್ರೀಡರ್ ಟೆಸ್ಟ್ ರಿಯಾಕ್ಟರ್‌ನ (FBTR) ಅಣುಶಕ್ತಿ ಶಾಖ ಹಾಗೂ ಕಾಪರ್-ಕ್ಲೋರಿನ್ (Cu-Cl) ಥರ್ಮೋಕೆಮಿಕಲ್ ತಂತ್ರಜ್ಞಾನವನ್ನು ಬಳಸಿ ಕಾರ್ಯನಿರ್ವಹಿಸುವ ಈ ಜಗತ್ತಿನ ಮೊದಲ ಘಟಕವನ್ನು ಪರಮಾಣು ಇಂಧನ ಇಲಾಖೆಯ (DAE) ಕಾರ್ಯದರ್ಶಿಗಳಾದ ಡಾ. ಅಜಿತ್ ಕುಮಾರ್ ಮೊಹಂತಿ ಅವರು ಉದ್ಘಾಟಿಸಿದರು.
➤ ಸಾಮಾನ್ಯವಾಗಿ ಹೈಡ್ರೋಜನ್ ಉತ್ಪಾದನೆಗೆ ಹೆಚ್ಚಿನ ಪ್ರಮಾಣದ ವಿದ್ಯುತ್ ಅಥವಾ ಪಳೆಯುಳಿಕೆ ಇಂಧನಗಳ (Fossil Fuels) ಅಗತ್ಯವಿರುತ್ತದೆ. ಆದರೆ ಈ ಹೊಸ ಯೋಜನೆಯಲ್ಲಿ, ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರ (BARC) ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಕಾಪರ್-ಕ್ಲೋರಿನ್ (Cu-Cl) ಥರ್ಮೋಕೆಮಿಕಲ್ ಪ್ರಕ್ರಿಯೆಯನ್ನು ಬಳಸಲಾಗಿದೆ.
➤ ಈ ಪ್ರಕ್ರಿಯೆಯಲ್ಲಿ ನೇರವಾಗಿ ವಿದ್ಯುತ್ ಬಳಸುವ ಬದಲಾಗಿ, ಪರಮಾಣು ರಿಯಾಕ್ಟರ್‌ನಿಂದ ಹೊರಹೊಮ್ಮುವ ತೀವ್ರವಾದ ಶಾಖವನ್ನು (Nuclear Process Heat) ಬಳಸಿಕೊಂಡು ನೀರನ್ನು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ವಿಭಜಿಸಲಾಗುತ್ತದೆ.
➤ ಭಾರತಕ್ಕೆ ಇದರ ಮಹತ್ವ:
- ಕಾರ್ಬನ್ ಮುಕ್ತ ಇಂಧನ (Decarbonisation): ಹೈಡ್ರೋಜನ್ ಭವಿಷ್ಯದ ಇಂಧನವಾಗಿದೆ. ಅಣುಶಕ್ತಿಯನ್ನು ಬಳಸಿ ಇದನ್ನು ತಯಾರಿಸುವುದರಿಂದ ಯಾವುದೇ ಹಸಿರುಮನೆ ಅನಿಲ (Greenhouse Gases) ಬಿಡುಗಡೆಯಾಗುವುದಿಲ್ಲ. ಇದು ಭಾರತದ 'ನೆಟ್-ಝೀರೋ ಕಾರ್ಬನ್' ಗುರಿಗೆ ಪೂರಕವಾಗಿದೆ.
- ಇಂಧನ ಭದ್ರತೆ (Energy Security): ಭಾರತವು ತೈಲ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.
- ಸ್ವದೇಶಿ ತಂತ್ರಜ್ಞಾನ (Make in India): BARC ಮತ್ತು IGCAR ಸಂಸ್ಥೆಗಳು ಜಂಟಿಯಾಗಿ ಈ ತಂತ್ರಜ್ಞಾನದ ವಿನ್ಯಾಸ, ಪರೀಕ್ಷೆ ಮತ್ತು ಸ್ಥಾಪನೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ಮಾಡಿವೆ.
ಯಾವುದೇ ಉದ್ಯೋಗದ ಅಪ್ಡೇಟ್ ಮಿಸ್ ಮಾಡಿಕೊಳ್ಳಬೇಡಿ; ಕ್ಷಣಕ್ಷಣದ ಮಾಹಿತಿಗಾಗಿ 'KPSCVaani' ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.