➤ ಭಾರತದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ 7ನೇ ಅಯಾಗ್ರಿವಾಲ್ಟಿಕ್ಸ್ ಜಾಗತಿಕ ಸಮ್ಮೇಳನ-2026 (7th AgriVoltaics World Conference 2026) ಹೊಸ ದೆಹಲಿಯ ಭಾರತ್ ಮಂಟಪದಲ್ಲಿ ಅಕ್ಟೋಬರ್ 21 ರಿಂದ 23 ರವರೆಗೆ ಅದ್ಧೂರಿಯಾಗಿ ನಡೆಯಿತು.
- ಸ್ಥಳ: ಭಾರತ್ ಮಂಟಪ, ಪ್ರಗತಿ ಮೈದಾನ, ಹೊಸ ದೆಹಲಿ.
- ಉದ್ಘಾಟನೆ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.
- ಧ್ಯೇಯವಾಕ್ಯ (Theme): "ಪವರಿಂಗ್ ದಿ ಗ್ಲೋಬಲ್ ಸೌತ್" (Powering the Global South).
➤ ಅಯಾಗ್ರಿವಾಲ್ಟಿಕ್ಸ್ ಎಂದರೆ ಭೂಮಿಯಲ್ಲಿ ಏಕಕಾಲಕ್ಕೆ ಕೃಷಿ ಬೆಳೆಗಳನ್ನು ಬೆಳೆಯುವುದು ಮತ್ತು ಸೌರ ವಿದ್ಯುತ್ (Solar Power) ಉತ್ಪಾದಿಸುವುದು.
- ಇದರಲ್ಲಿ ಸೌರ ಫಲಕಗಳನ್ನು (Solar Panels) ನೆಲದಿಂದ ಎತ್ತರದಲ್ಲಿ (Stilts) ಅಳವಡಿಸಲಾಗುತ್ತದೆ, ಇದರಿಂದ ಕೆಳಭಾಗದಲ್ಲಿ ಎಂದಿನಂತೆ ಕೃಷಿ ಬೆಳೆಗಳನ್ನು ಬೆಳೆಯಲು ಮತ್ತು ಕೃಷಿ ಯಂತ್ರೋಪಕರಣಗಳನ್ನು ಬಳಸಲು ಅನುಕೂಲವಾಗುತ್ತದೆ.
- ಇದು ಆಹಾರ ಉತ್ಪಾದನೆ ಮತ್ತು ಸ್ವಚ್ಛ ಇಂಧನ ಉತ್ಪಾದನೆ ನಡುವಿನ ಭೂಮಿಗಾಗಿನ ಸ್ಪರ್ಧೆಯನ್ನು ತಪ್ಪಿಸಲು ಸಹಕಾರಿಯಾಗಿದೆ.
➤ ಸಮ್ಮೇಳನದ ಪ್ರಮುಖ ಮುಖ್ಯಾಂಶಗಳು & ಸರ್ಕಾರದ ಗುರಿಗಳು:
1. ಪಿಎಂ-ಕುಸುಮ್ (PM-KUSUM) ಯೋಜನೆ ಜೊತೆ ಅನುಷ್ಠಾನ: ಭಾರತದಲ್ಲಿ ಕೃಷಿ ಭೂಮಿಯಲ್ಲಿ ಸೌರಶಕ್ತಿ ಬಳಕೆಯನ್ನು ಉತ್ತೇಜಿಸಲು 'ಪಿಎಂ-ಕುಸುಮ್' ಯೋಜನೆಯಡಿ ಅಯಾಗ್ರಿವಾಲ್ಟಿಕ್ಸ್ ಅನ್ನು ಜೋಡಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸುಮಾರು 30 ಲಕ್ಷಕ್ಕೂ ಅಧಿಕ ಕೃಷಿ ಪಂಪ್ಸೆಟ್ಗಳನ್ನು ಈಗಾಗಲೇ ಸೌರಶಕ್ತೀಕರಣಗೊಳಿಸಲಾಗಿದೆ.
2. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಒತ್ತು: ಭಾರತದ ಶೇ.85ಕ್ಕೂ ಹೆಚ್ಚು ರೈತರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಾಗಿರುವುದರಿಂದ, ಅವರ ಆದಾಯವನ್ನು ದ್ವಿಗುಣಗೊಳಿಸಲು ಮತ್ತು ಯೋಜನೆ ಮುಗಿದ ನಂತರ ಭೂಮಿ ಮತ್ತೆ ಕೃಷಿಗೆ ಲಭ್ಯವಾಗುವಂತೆ ನೀತಿಗಳು ರೂಪುಗೊಳ್ಳಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
3. ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ: ದೇಶದಲ್ಲಿ ಒಟ್ಟು ಇಂಧನ ಸಾಮರ್ಥ್ಯದಲ್ಲಿ ಪಳೆಯುಳಿಕೆ ಅಲ್ಲದ (Non-fossil) ಇಂಧನ ಸಾಮರ್ಥ್ಯವು 308 GW (ಗಿಗಾವ್ಯಾಟ್) ಗಡಿ ದಾಟಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.