➤ ಜಪಾನ್‌ನ ಐಚಿ-ನಗೋಯಾದಲ್ಲಿ ಆರಂಭವಾಗಿರುವ 20ನೇ ಏಷ್ಯನ್ ಗೇಮ್ಸ್ (Asian Games 2026) ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದೆ. ಕೂಟದ ಮೊದಲ ದಿನವೇ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಎರಡು ಬೆಳ್ಳಿ ಪದಕಗಳು ಲಭಿಸಿದ್ದು, ಕ್ರೀಡಾಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
➤ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗ: ಮೊದಲ ಪದಕ: ಶೂಟಿಂಗ್ ಸ್ಪರ್ಧೆಯ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಇಳವೇನಿಲ್ ವಲರಿವನ್, ಸೋನಮ್ ಮಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ಭಾರತೀಯ ತಂಡವು ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ಪ್ರಸಕ್ತ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತನ್ನ ಪದಕಗಳ ಖಾತೆಯನ್ನು ತೆರೆಯಿತು.
1. ಚಿನ್ನ: ಚೀನಾ ತಂಡ
2. ಬೆಳ್ಳಿ: ಭಾರತ ತಂಡ (ಇಳವೇನಿಲ್, ಸೋನಮ್, ವಿದರ್ಶಾ)
3. ಕಂಚು: ಜಪಾನ್ ತಂಡ
➤ ವೈಯಕ್ತಿಕ ವಿಭಾಗದಲ್ಲೂ ಇಳವೇನಿಲ್‌ಗೆ 'ಬೆಳ್ಳಿ' ಮಿಂಚು: ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದ ನಂತರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲೂ ಇಳವೇನಿಲ್ ವಲರಿವನ್ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡರು. ಅತ್ಯಂತ ರೋಚಕವಾಗಿ ನಡೆದ ಫೈನಲ್ ಹಂತದಲ್ಲಿ 252.4 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡರು.
1. ಚಿನ್ನದ ಪದಕ: ಜಪಾನ್‌ನ ಹಿನಾತಾ ತೈಚಿ (253.0 ಅಂಕಗಳು - ಏಷ್ಯನ್ ಗೇಮ್ಸ್ ದಾಖಲೆ)
2. ಬೆಳ್ಳಿ ಪದಕ: ಭಾರತದ ಇಳವೇನಿಲ್ ವಲರಿವನ್ (252.4 ಅಂಕಗಳು)
3. ಕಂಚಿನ ಪದಕ: ದಕ್ಷಿಣ ಕೊರಿಯಾದ ಬ್ಯಾನ್ ಹೋಜನ್ (230.4 ಅಂಕಗಳು)
➤ ಎಂಎಂಎ (MMA): ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಪಟು ಸುಚಿಕಾ ತರಿಯಾಲ್ ಮಹಿಳೆಯರ ಟ್ರೆಡಿಷನಲ್ ಎಂಎಂಎ 60 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಪದಕವನ್ನು ಖಚಿತಪಡಿಸಿದ್ದರು. ಸೆಮಿಫೈನಲ್ ಹೆಣಗಾಟದಲ್ಲಿ ಸಿಂಗಾಪುರದ ಹುಯಿ ಹೂನ್ ಟಿಯೊ ವಿರುದ್ಧ ಸೋಲನುಭವಿಸಿದ ಅವರು ಕಂಚಿನ ಪದಕ (Bronze Medal) ಗೆದ್ದುಕೊಂಡರು. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (MMA) ಕ್ರೀಡೆಯಲ್ಲಿ ಭಾರತಕ್ಕೆ ದೊರೆತ ಮೊಟ್ಟಮೊದಲ ಪದಕ ಇದಾಗಿದೆ.
ಸೋಮವಾರ, 21 ಸೆಪ್ಟೆಂಬರ್ 2026
3:08 ಅಪರಾಹ್ನ
Daily PDF
ಏಷ್ಯನ್ ಗೇಮ್ಸ್ 2026: ಭಾರತಕ್ಕೆ ಪದಕದ ಶುಭಾರಂಭ; ಶೂಟಿಂಗ್ನಲ್ಲಿ ಎರಡು ಬೆಳ್ಳಿ!
Authored by:
Akshata Halli