➤ ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ಸಣ್ಣ ತೆರಿಗೆದಾರರು ತಮ್ಮ ವಿದೇಶಿ ಆಸ್ತಿ ಮತ್ತು ಆದಾಯವನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಲು ನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ.
- ಯೋಜನೆಯ ಹೆಸರು: Foreign Assets of Small Taxpayers-Disclosure Scheme, 2026 (FAST-DS)
- ಜಾರಿಗೆ ತಂದ ಸಂಸ್ಥೆ: ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT - Central Board of Direct Taxes)
- ಕಾಯ್ದೆಯ ಅಡಿಯಲ್ಲಿ ಜಾರಿ: ಹಣಕಾಸು ಕಾಯ್ದೆ 2026ರ (Finance Act, 2026) ಅಧ್ಯಾಯ IV ರ ಅಡಿಯಲ್ಲಿ ಇದನ್ನು ಅಧಿಸೂಚಿಸಲಾಗಿದೆ.
- ಅವಧಿ: 2026 ರ ಆಗಸ್ಟ್ 16 ರಿಂದ 2026 ರ ಡಿಸೆಂಬರ್ 31 ರವರೆಗೆ (ಆನ್‌ಲೈನ್ ಮೂಲಕ ನಮೂನೆ Form 1 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ).
➤ ಯೋಜನೆಯ ಮುಖ್ಯ ಉದ್ದೇಶಗಳು:
- ವಿದೇಶಗಳಲ್ಲಿ ಅಧ್ಯಯನ ಮುಗಿಸಿ ಬಂದ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಪ್ರಮುಖ ಐಟಿ ಮತ್ತು ಬಹುರಾಷ್ಟ್ರೀಯ (MNC) ಕಂಪನಿಗಳ ನೌಕರರು (ESOPs ಹೊಂದಿರುವವರು) ಹಾಗೂ NRI ಆಗಿದ್ದು ಭಾರತಕ್ಕೆ ಮರಳಿದವರು ತಿಳಿಯದೇ ಮಾಡಿರುವ ವಿದೇಶಿ ಆಸ್ತಿ ಸಲ್ಲಿಕೆಯ ಲೋಪಗಳನ್ನು ಸರಿಪಡಿಸಲು ಅವಕಾಶ ನೀಡುವುದು.
- ಶಿಕ್ಷಾರ್ಹ ಅಪರಾಧ ಅಥವಾ ದಂಡದ ಭಯವಿಲ್ಲದೆ ಕಾನೂನುಬದ್ಧವಾಗಿ ಆಸ್ತಿ ವಿವರಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು.
➤ ಯೋಜನೆಗೆ ಸಂಬಂಧಿಸಿದ 2 ಪ್ರಮುಖ ವರ್ಗಗಳು:
- ವರ್ಗ 1 (Category 1): ಈ ಹಿಂದೆ ಆದಾಯ ತೆರಿಗೆ ಸಲ್ಲಿಕೆಯಲ್ಲಿ ತೋರಿಸದಿರುವ ಅಥವಾ ತೆರಿಗೆ ವ್ಯಾಪ್ತಿಗೆ ತರದಿರುವ ವಿದೇಶಿ ಆಸ್ತಿ ಅಥವಾ ಆದಾಯಕ್ಕೆ ಇದು ಅನ್ವಯಿಸುತ್ತದೆ. ಈ ವರ್ಗದ ಅಡಿಯಲ್ಲಿ ಗರಿಷ್ಠ ₹1 ಕೋಟಿಯವರೆಗಿನ ಆಸ್ತಿಯನ್ನು ಘೋಷಿಸಬಹುದು. ಇದಕ್ಕೆ ಶೇಕಡಾ 30 ರಷ್ಟು ತೆರಿಗೆ ಹಾಗೂ ಹೆಚ್ಚುವರಿ ಶೇಕಡಾ 30 ರಷ್ಟು ದಂಡ ಸೇರಿದಂತೆ ಒಟ್ಟು ಶೇಕಡಾ 60 ರಷ್ಟು (60%) ಪರಿಣಾಮಕಾರಿ ತೆರಿಗೆಯನ್ನು ವಿಧಿಸಲಾಗುತ್ತದೆ.
- ವರ್ಗ 2 (Category 2): ಈಗಾಗಲೇ ಭಾರತದಲ್ಲಿ ಸೂಕ್ತವಾಗಿ ತೆರಿಗೆ ಪಾವತಿಸಿದ ಅಥವಾ ವ್ಯಕ್ತಿಯು ಅನಿವಾಸಿ ಭಾರತೀಯನಾಗಿದ್ದಾಗ (NRI) ಗಳಿಸಿದ ವಿದೇಶಿ ಆಸ್ತಿಗಳಿಗೆ ಇದು ಅನ್ವಯಿಸುತ್ತದೆ (ಆದರೆ ಹಿಂದಿನ ITR ನಮೂದಿನಲ್ಲಿ ವರದಿ ಮಾಡಲು ಬಿಟ್ಟುಹೋಗಿದ್ದರೆ). ಈ ವರ್ಗದ ಅಡಿಯಲ್ಲಿ ಗರಿಷ್ಠ ₹5 ಕೋಟಿಯವರೆಗಿನ ಆಸ್ತಿಯನ್ನು ನಮೂದಿಸಲು ಅವಕಾಶವಿದ್ದು, ಇದಕ್ಕೆ ತೆರಿಗೆ ಅಥವಾ ದಂಡದ ಬದಲಾಗಿ ₹1 ಲಕ್ಷ ನಿಯಮಿತ (ಫ್ಲಾಟ್) ಶುಲ್ಕವನ್ನು ಪಾವತಿಸಬೇಕಾಗುತ್ತದೆ.
➤ ಪ್ರಮುಖ ಕಾನೂನು ರಕ್ಷಣೆ ಮತ್ತು ವಿನಾಯಿತಿಗಳು:
- ಕಪ್ಪು ಹಣ ಕಾಯ್ದೆ 2015 ರಡಿ ವಿನಾಯಿತಿ: ಈ ಯೋಜನೆಯಡಿ ಸರಿಯಾದ ವಿವರ ಸಲ್ಲಿಸುವ ತೆರಿಗೆದಾರರಿಗೆ 'Black Money (Undisclosed Foreign Income and Assets) and Imposition of Tax Act, 2015' ರ ಅಡಿಯಲ್ಲಿ ಯಾವುದೇ ದಂಡ, ತನಿಖೆ ಅಥವಾ ಕ್ರಿಮಿನಲ್ ಮೊಕದ್ದಮೆಯಿಂದ (Prosecution Immunity) ಪೂರ್ಣ ರಕ್ಷಣೆ ಸಿಗುತ್ತದೆ.
- ಆದಾಯ ತೆರಿಗೆ ಕಾಯ್ದೆ 1961 ರಡಿ ವಿನಾಯಿತಿ: ಸಲ್ಲಿಕೆಯಾದ ಆದಾಯವನ್ನು ಮತ್ತೆ ಸಾಮಾನ್ಯ ತೆರಿಗೆ ಲೆಕ್ಕಾಚಾರಕ್ಕೆ ಸೇರಿಸಲಾಗುವುದಿಲ್ಲ.