➤ ಇತ್ತೀಚೆಗೆ ಬಿಡುಗಡೆಯಾದ ‘ಟೈಮ್ಸ್ ಹೈಯರ್ ಎಜುಕೇಶನ್’ (THE) ಜಾಗತಿಕ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ 2027 ರಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.
- ಸಂಸ್ಥೆಯ ಹೆಸರು: ಭಾರತೀಯ ವಿಜ್ಞಾನ ಸಂಸ್ಥೆ (IISc Bengaluru)
- ವರದಿ ಬಿಡುಗಡೆ ಮಾಡಿದ ಸಂಸ್ಥೆ: ಟೈಮ್ಸ್ ಹೈಯರ್ ಎಜುಕೇಶನ್ (Times Higher Education - THE)
- ಜಾಗತಿಕ ರ‍್ಯಾಂಕಿಂಗ್ (2027): 254ನೇ ಸ್ಥಾನ (ಅಮೆರಿಕದ ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದೊಂದಿಗೆ ಜಂಟಿ)
- ಭಾರತದಲ್ಲಿ ಸ್ಥಾನ: 1ನೇ ಸ್ಥಾನ (ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರಸ್ಥಾನ)
- ಭಾಗವಹಿಸಿದ ಭಾರತೀಯ ಸಂಸ್ಥೆಗಳು: 143 (ಏಷ್ಯಾದಲ್ಲೇ ಗರಿಷ್ಠ ಪ್ರತಿನಿಧ್ಯ ಹೊಂದಿದ ದೇಶ)
- ಒಟ್ಟು ಅಂಕಗಳು (Overall Score): 57.0 (ಸಂಶೋಧನಾ ವಾತಾವರಣಕ್ಕೆ 98.0 ಅಂಕಗಳು)
➤ ರ‍್ಯಾಂಕಿಂಗ್ ಕುರಿತು ಸಮಗ್ರ ಮಾಹಿತಿ:
1. ಜಾಗತಿಕ ಮಟ್ಟದಲ್ಲಿ ಸ್ಥಾನ ಕುಸಿತ:
ಟೈಮ್ಸ್ ಹೈಯರ್ ಎಜುಕೇಶನ್ 2027 ರ ರ‍್ಯಾಂಕಿಂಗ್‌ನಲ್ಲಿ IISc ಬೆಂಗಳೂರು 254ನೇ ಸ್ಥಾನದಲ್ಲಿದೆ. ಕಳೆದ 2024 ಮತ್ತು 2025ರ ಆವೃತ್ತಿಗಳಲ್ಲಿ IISc ಸಂಸ್ಥೆಯು 201-250 ಬ್ಯಾಂಡ್‌ ವ್ಯಾಪ್ತಿಯಲ್ಲಿತ್ತು.
2. ಸಂಶೋಧನೆಯಲ್ಲಿ ಅತ್ಯುತ್ತಮ ಸಾಧನೆ:
IISc ಬೆಂಗಳೂರು ಸಂಸ್ಥೆಯು ಸಂಶೋಧನಾ ವಾತಾವರಣ (Research Environment) ವಿಭಾಗದಲ್ಲಿ ಬರೋಬ್ಬರಿ 98.0 ಅಂಕಗಳನ್ನು ಗಳಿಸಿದೆ. ಉಳಿದಂತೆ ಬೋಧನೆ (Teaching) ವಿಭಾಗದಲ್ಲಿ 62.1 ಮತ್ತು ಸಂಶೋಧನಾ ಗುಣಮಟ್ಟದಲ್ಲಿ 58.6 ಅಂಕಗಳನ್ನು ಪಡೆದುಕೊಂಡಿದೆ.
3. ಭಾರತೀಯ ಸಂಸ್ಥೆಗಳ ಪ್ರಾತಿನಿಧ್ಯ ಹೆಚ್ಚಳ:
ಈ ಬಾರಿ ಜಾಗತಿಕ ರ‍್ಯಾಂಕಿಂಗ್‌ನಲ್ಲಿ ಭಾರತದ ಒಟ್ಟು 143 ವಿಶ್ವವಿದ್ಯಾಲಯಗಳು/ಸಂಸ್ಥೆಗಳು ಭಾಗವಹಿಸಿದ್ದವು (ಕಳೆದ ವರ್ಷ 128 ಸಂಸ್ಥೆಗಳಿದ್ದವು). ಈ ಮೂಲಕ ಏಷ್ಯಾ ಖಂಡದಲ್ಲೇ ಸತತ ಎರಡನೇ ವರ್ಷ ಅತಿ ಹೆಚ್ಚು ಪ್ರತಿನಿಧಿಸುವ ದೇಶವಾಗಿ ಭಾರತ ಹೊರಹೊಮ್ಮಿದೆ. ಆದಾಗ್ಯೂ, ಭಾರತದ ಯಾವುದೇ ವಿಶ್ವವಿದ್ಯಾಲಯ ಜಾಗತಿಕ ಟಾಪ್-250 ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.