* ಮುಂಬರುವ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶದಿಂದ ಯುಎಇಗೆ (ಯುನೈಟೆಡ್ ಅರಬ್ ಎಮಿರೇಟ್ಸ್) ಸ್ಥಳಾಂತರಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ.
* ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ 9ನೇ ಆವೃತ್ತಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ನೇತೃತ್ವದಲ್ಲಿ ಆಯೋಜಿಸಲಾಗುತ್ತದೆ.
* ಬಾಂಗ್ಲಾದಲ್ಲಿ ಕಳೆದ ಕೆಲವು ದಿನಗಳಲ್ಲಿ ಗಲಭೆ, ಹಿಂಸಾಚಾರಗಳು ಮತ್ತು ಉದ್ವಿಗ್ನ ವಾತಾವರಣ ಇರುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ (ಐಸಿಸಿ) ಸಂಸ್ಥೆಯು ಆಗಸ್ಟ್ 20 ರಂದು (ಮಂಗಳವಾರ) ಈ ನಿರ್ಧಾರ ಕೈಗೊಂಡಿದೆ.
* ಅಕ್ಟೋಬರ್ 3 ರಿಂದ 20 ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ಸೇರಿದಂತೆ ಪ್ರಮುಖ ತಂಡಗಳು ಭಾಗವಹಿಸಲಿವೆ. ಬಾಂಗ್ಲಾದೇಶವೇ ಆತಿಥ್ಯ ವಹಿಸಲಿದ್ದು, ಟೂರ್ನಿ ಪಂದ್ಯಗಳು ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿವೆ.
ಬುಧವಾರ, 21 ಆಗಸ್ಟ್ 2024
10:48 ಪೂರ್ವಾಹ್ನ
Daily PDF
ICC Women's T20 World Cup : ವಿಶ್ವಕಪ್ ಟೂರ್ನಿ ಬಾಂಗ್ಲಾದಿಂದ ಯುಎಇಗೆ ಸ್ಥಳಾಂತರ
Authored by:
Bhagya R K