* ಯೆಸ್ ಬ್ಯಾಂಕ್ ಇದೀಗ ಹೊಸ ಬ್ರ್ಯಾಂಡ್ ಲೋಗೋ ಅನಾವರಣ ಮಾಡಿದ್ದು, ಹೊಸ ರೂಪದಲ್ಲಿ ಜನರ ಮುಂದೆ ಹೋಗಲು ತೀರ್ಮಾನಿಸಿದೆ.
* ಖಾಸಗಿ ರಂಗದ ಪ್ರಮುಖ ಬ್ಯಾಂಕ್ ಆಗಿರುವ ಯೆಸ್ ಬ್ಯಾಂಕ್ ಮಂಗಳವಾರ (ಮೇ 30) ಕಂಪನಿಯ ಹೊಸ ಲೋಗೋವನ್ನು ಬಿಡುಗಡೆ ಮಾಡಿದ್ದು, ಬ್ಯಾಂಕಿನ ಪ್ರಮುಖ ಉದ್ದೇಶವನ್ನು ಸಾರುವ 'ಲೈಫ್ ಕೊ ಬನಾವೊ ರಿಚ್' ಎಂಬ ಅಡಿಬರಹದೊಂದಿಗೆ ಸಮಗ್ರ ಅಭಿಯಾನವನ್ನು ನಡೆಸಲು ಸಿದ್ದವಾಗಿದೆ.
* "ವಿನ್ಯಾಸದ ಭಾಷೆಯು ಡಿಜಿಟಲ್ ಸ್ನೇಹಿಯಾಗಿದ್ದು, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಬ್ರ್ಯಾಂಡ್ ಅನ್ನು ಪ್ರತಿಬಿಂಬಿಸುತ್ತದೆ. ಇದು ಬ್ಯಾಂಕ್‌ನ ಪ್ರಗತಿಪರ ಮನೋಭಾವದ ಜತೆ ತನ್ನ ಪ್ರಮುಖ ಮೌಲ್ಯಗಳಿಗೆ ಒತ್ತು ನೀಡಿರುವುದನ್ನು ಬಿಂಬಿಸುತ್ತದೆ.
ಹೊಸ ಲೋಗೊ ಬಿಡುಗಡೆ ಮಾಡಿದ ಯೆಸ್ ಬ್ಯಾಂಕ್
Published by Akshata Halli
01 ಜೂನ್ 2023