* ಮಧ್ಯ ಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ 'ತಾನ್‌ಸೇನ್ ಸಮ್ಮಾನ್' ಪುರಸ್ಕಾರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಉತ್ತರ ಕನ್ನಡ ಜಿಲ್ಲೆಯ ಪಂಡಿತ ಗಣಪತಿ ಭಟ್ ಹಾಸಣಗಿ ಅವರು ಆಯ್ಕೆಯಾಗಿದ್ದಾರೆ.
* 2023 ಡಿಸೆಂಬರ್ 24ರಂದು ಗ್ವಾಲಿಯರ್ ನಲ್ಲಿ ನಡೆಯುವ ತಾನ್ ಸೆನ್ ಕಾರ್ಯಕ್ರಮದಲ್ಲಿ ಗಣಪತಿ ಭಟ್ ಹಾಸಣಗಿ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು.
* ಯಲ್ಲಾಪುರ ತಾಲ್ಲೂಕಿನ ಹಾಸಣಗಿ ಗ್ರಾಮದ ಗಣಪತಿ ಭಟ್ ಹಾಸಣಗಿ ಅವರು ದಿ.ಪಂ. ಬಸವರಾಜ ರಾಜಗುರು ಅವರ ಶಿಷ್ಯ. ಇವರು ಕಿರಾಣಾ- ಗ್ವಾಲಿಯರ್ ಘರಾನಾ ಪರಂಪರೆಗೆ ಸೇರಿದವರು.
* ಗಣಪತಿಯವರು ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ ಗುರು ಕುಲ ಟ್ರಸ್ಟ್‌ನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (2007), ವತ್ಸಲಭಾಯಿ ಭೀಮ್‌ಸೇನ್ ಜೋಶಿ ಪ್ರಶಸ್ತಿ (2006) ಸೇರಿದಂತೆ ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.
ಹಿಂದೂಸ್ತಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿಗೆ ತಾನ್‌ಸೇನ್ ಸನ್ಮಾನ್ ಪುರಸ್ಕಾರ
Published by Yallamma G
14 ಡಿಸೆಂಬರ್ 2023