➤ ಹಿಮಾಚಲ ಪ್ರದೇಶ ಸರ್ಕಾರದ ವನ್ಯಜೀವಿ ವಿಭಾಗವು ಹಮಾಲಾಯನ್ ಪ್ರದೇಶದ ಅಳಿವಿನಂಚಿನಲ್ಲಿರುವ ಅಪರೂಪದ 'ಚೀರ್ ಫೆಸೆಂಟ್' (Chir Pheasant - ಸ್ಥಳೀಯವಾಗಿ 'ಚಿರ್ ತತ್ತಾರ್') ಪಕ್ಷಿಗಳ ಸಂರಕ್ಷಣೆ ಮತ್ತು ಮರುಪರಿಚಯ ಕಾರ್ಯಕ್ರಮದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. 2019-20ರಲ್ಲಿ ಕೇವಲ ಶೇ. 11.11 ಇದ್ದ ಈ ಪಕ್ಷಿಗಳ ಬದುಕುಳಿಯುವಿಕೆಯ ಪ್ರಮಾಣವು (Survival Rate) 2024-25ರಲ್ಲಿ ಶೇ. 100ಕ್ಕೆ ಏರಿಕೆಯಾಗಿದೆ.
➤ ಪ್ರಮುಖ ಮುಖ್ಯಾಂಶಗಳು :
- ಸಾಧನೆ: 2019-20ನೇ ಸಾಲಿನಲ್ಲಿ ಕೇವಲ ಶೇ. 11.11 ರಷ್ಟಿದ್ದ ಬಿಡುಗಡೆಗೊಂಡ ಪಕ್ಷಿಗಳ ಬದುಕುಳಿಯುವಿಕೆ ದರವು 2024-25ರಲ್ಲಿ ಶೇ. 100ರಷ್ಟು ಯಶಸ್ಸು ಕಂಡಿದೆ.
- ಸಾಫ್ಟ್-ರಿಲೀಸ್ ತಂತ್ರ (Soft-Release Method): ಸೆರೆಹಿಡಿದು ಸಾಕಿದ ಪಕ್ಷಿಗಳನ್ನು ತಕ್ಷಣವೇ ಕಾಡಿಗೆ ಬಿಡದೆ, ಅವು ಸ್ವಾಭಾವಿಕ ಪರಿಸರಕ್ಕೆ ಕ್ರಮೇಣ ಒಗ್ಗಿಕೊಳ್ಳಲು ಅವಕಾಶ ನೀಡುವ 'ಸಾಫ್ಟ್-ರಿಲೀಸ್' ವಿಧಾನವನ್ನು ಇಲ್ಲಿ ಬಳಸಲಾಗಿದೆ.
- ಸಂರಕ್ಷಣೆ ಮತ್ತು ತಳಿವೃದ್ಧಿ ಕೇಂದ್ರ: ಸೋಲನ್ ಜಿಲ್ಲೆಯ ಚೈಲ್ನಲ್ಲಿರುವ 'ಖಾದಿಯುನ್ ಚೀರ್ ಫೆಸೆಂಟ್ ಬ್ರೀಡಿಂಗ್ ಸೆಂಟರ್' (Khadiyun Cheer Pheasant Breeding Centre) ಈ ಯೋಜನೆಯ ಪ್ರಮುಖ ಕೇಂದ್ರವಾಗಿದೆ. ಇದು ಕೇಂದ್ರ ಮೃಗಾಲಯ ಪ್ರಾಧಿಕಾರದ (Central Zoo Authority) ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುತ್ತದೆ.
- ಮೇಲ್ವಿಚಾರಣಾ ತಂತ್ರಜ್ಞಾನ: ಕಾಡಿಗೆ ಬಿಡಲಾದ ಪಕ್ಷಿಗಳ ಚಲನವಲನ ಹಾಗೂ ಮರುಕಳಿಸುವಿಕೆಯನ್ನು ನಿಖರವಾಗಿ ಗಮನಿಸಲು ರೇಡಿಯೋ ಟ್ರಾನ್ಸ್ಮಿಟರ್ಗಳು (Radio Transmitters) ಮತ್ತು ಕ್ಯಾಮೆರಾ ಟ್ರಾಪ್ಗಳನ್ನು (Camera Traps) ಬಳಸಲಾಗಿದೆ.
➤ 'ಚೀರ್ ಫೆಸೆಂಟ್' (Chir Pheasant) ಪಕ್ಷಿಯ ವಿಶೇಷತೆಗಳು ಮತ್ತು ಸಂರಕ್ಷನಾ ಸ್ಥಿತಿ:
- ಸ್ಥಳೀಯ ಹೆಸರು: ಚಿರ್ ತತ್ತಾರ್ (Chir Tittar).
- ವ್ಯಾಪ್ತಿ: ಇದು ಪಶ್ಚಿಮ ಹಿಮಾಲಯದ (Western Himalayas) ನಿರ್ದಿಷ್ಟ ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡುಬರುವ ಪಕ್ಷಿಯಾಗಿದೆ.
- IUCN ಕೆಂಪು ಪಟ್ಟಿ (Red List): 'ಅಪಾಯಕ್ಕೊಳಗಾದ ಪ್ರಭೇದ' (Vulnerable) ಎಂದು ಪಟ್ಟಿ ಮಾಡಲಾಗಿದೆ.
- ವನ್ಯಜೀವಿ ಸಂರಕ್ಷನಾ ಕಾಯ್ದೆ, 1972: ಈ ಕಾಯ್ದೆಯ ಅನುಸೂಚಿ-I (Schedule I) ಅಡಿಯಲ್ಲಿ ಉನ್ನತ ಮಟ್ಟದ ಕಾನೂನು ರಕ್ಷಣೆ ನೀಡಲಾಗಿದೆ.
ಹಿಮಾಚಲ ಪ್ರದೇಶದಲ್ಲಿ 'ಚೀರ್ ಫೆಸೆಂಟ್' (Chir Pheasant) ಪಕ್ಷಿಗಳ ಮರುಪರಿಚಯ ಯಶಸ್ಸು: ಬದುಕುಳಿಯುವಿಕೆ ಪ್ರಮಾಣ ಶೇ. 100ಕ್ಕೆ ಏರಿಕೆ!
Published by Akshata Halli
2 hours ago