➤ ಭಾರತದ ಪ್ರಮುಖ ಐಟಿ ದಿಗ್ಗಜ ‘ಎಚ್ಸಿಎಲ್ಟೆಕ್’ (HCLTech) ಮತ್ತು ಜಪಾನ್ನ ಅತ್ಯಾಧುನಿಕ ಚಿಪ್ ತಯಾರಿಕಾ ಕಂಪನಿ ‘ರಾಪಿಡಸ್ ಕಾರ್ಪೊರೇಷನ್’ (Rapidus Corporation) ಜಂಟಿಯಾಗಿ ಕರ್ನಾಟಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿವೆ. ಜಪಾನ್ನ ಅತ್ಯಾಧುನಿಕ ಸೆಮಿಕಂಡಕ್ಟರ್ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸಲು, ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮೀಸಲು ಸೆಮಿಕಂಡಕ್ಟರ್ ಎಂಜಿನಿಯರಿಂಗ್ ಅಭಿವೃದ್ಧಿ ಕೇಂದ್ರಗಳನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ.
- ಸ್ಥಳಗಳು: ಬೆಂಗಳೂರು ಮತ್ತು ಹುಬ್ಬಳ್ಳಿ (ಕರ್ನಾಟಕ).
- ಭಾಗವಹಿಸಿದ ಸಂಸ್ಥೆಗಳು: ಭಾರತದ HCLTech ಮತ್ತು ಜಪಾನ್ನ Rapidus Corporation.
- ಮುಖ್ಯ ಉದ್ದೇಶ: ಮುಂದಿನ ಪೀಳಿಗೆಯ ಅತ್ಯಾಧುನಿಕ ಲಾಜಿಕ್ ಸೆಮಿಕಂಡಕ್ಟರ್ಗಳ (Next-generation logic semiconductors) ವಿನ್ಯಾಸ ಮತ್ತು ಎಂಜಿನಿಯರಿಂಗ್ ಅಗತ್ಯಗಳನ್ನು ಬೆಂಬಲಿಸುವುದು.
➤ ಈ ಕೇಂದ್ರಗಳ ಪ್ರಮುಖ ಕಾರ್ಯಕ್ಷೇತ್ರಗಳು: ಈ ನೂತನ ಎಂಜಿನಿಯರಿಂಗ್ ಕೇಂದ್ರಗಳು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಂತ ಉನ್ನತ ತಂತ್ರಜ್ಞಾನದ ಕೆಲಸಗಳನ್ನು ನಿರ್ವಹಿಸಲಿವೆ:
1. ಮಾಸ್ಕ್ ವಿನ್ಯಾಸ (Mask Design): ಚಿಪ್ ಉತ್ಪಾದನೆಗೆ ಅಗತ್ಯವಿರುವ ನಿಖರ ಮಾಸ್ಕ್ ವಿನ್ಯಾಸಗೊಳಿಸುವುದು.
2. ವಿನ್ಯಾಸ ಮೂಲಭೂತ ಸೌಕರ್ಯ (Design Infrastructure).
3. ಪ್ರಕ್ರಿಯೆ ವಿನ್ಯಾಸ ಕಿಟ್ ಅಭಿವೃದ್ಧಿ (Process Design Kit - PDK Development).
4. ವಿನ್ಯಾಸ ತಂತ್ರಜ್ಞಾನ ಸಹ-ಅನುಕೂಲತೆ (Design Technology Co-Optimisation - DTCO).
5. ಭೌತಿಕ ಲೇಔಟ್ ವಿನ್ಯಾಸ (Physical Layout Design).
➤ ಯುವ ಪ್ರತಿಭೆಗಳಿಗೆ ಬೃಹತ್ ಅವಕಾಶ (Talent Pipeline): ಈ ಪಾಲುದಾರಿಕೆಯ ಮತ್ತೊಂದು ಪ್ರಮುಖ ಗುರಿಯು ಭಾರತದಲ್ಲಿ ಉನ್ನತ ದರ್ಜೆಯ ಎಂಜಿನಿಯರಿಂಗ್ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವುದಾಗಿದೆ. ಇದರ ಮೂಲಕ ಜಪಾನ್ನಲ್ಲಿರುವ ರಾಪಿಡಸ್ ಕಂಪನಿಯ ದೀರ್ಘಕಾಲೀನ ತಾಂತ್ರಿಕ ಕಾರ್ಯಪಡೆಯ ಅವಶ್ಯಕತೆಗಳನ್ನು ಪೂರೈಸಲು ಸಮರ್ಥವಾದ ಭಾರತೀಯ ಎಂಜಿನಿಯರ್ಗಳ ಪಡೆಯನ್ನು (Talent Pipeline) ಸಿದ್ಧಪಡಿಸಲಾಗುತ್ತದೆ.
➤ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ರಂಗ: ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಈ ಕೇಂದ್ರಗಳು ಆರಂಭವಾಗಿರುವುದು ರಾಜ್ಯದ ಟಿ 2 ಟೈರ್ (Tier-2) ನಗರಗಳಾದ ಹುಬ್ಬಳ್ಳಿ ಹುಬ್ಬಳ್ಳಿಯಂತಹ ಪ್ರದೇಶಗಳಿಗೂ ಹೈಟೆಕ್ ಉದ್ಯಮಗಳು ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕದಲ್ಲಿ ಜಪಾನ್ನ ‘ರಾಪಿಡಸ್’ ಸೆಮಿಕಂಡಕ್ಟರ್ ಅಭಿವೃದ್ಧಿ ಕೇಂದ್ರಗಳು ಆರಂಭ: ಬೆಂಗಳೂರು ಮತ್ತು ಹುಬ್ಬಳ್ಳಿಗೆ ಗರಿಮೆ!
Published by Akshata Halli
2 hours ago