* ಭಾರತದ ಜೀವನ್ ನೆಡುಂಚೆಳಿಯನ್ ಮತ್ತು ಅವರ ಜೊತೆಗಾರ ವಿಜಯ್ ಸುಂದರ್ ಪ್ರಶಾಂತ್ ಅವರು ಜರ್ಮನಿಯ ಕಾನ್‌ಸ್ಟಾಂಟಿನ್ ಫ್ರಾಂಟ್ಜೆನ್ ಮತ್ತು ಹೆಂಡ್ರಿಕ್ ಜೆಬೆನ್ಸ್ ಅವರನ್ನು ಸೋಲಿಸಿ ಜೋಡಿಯಾಗಿ ತಮ್ಮ ಮೊದಲ ಓಪನ್ ಪುರುಷರ ಟೆನಿಸ್ ಟೂರ್ನಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
* ಒಂದು ಗಂಟೆ 49 ನಿಮಿಷಗಳವರೆಗೆ ನಡೆದ ಫೈನಲ್‌ನಲ್ಲಿ ಶ್ರೇಯಾಂಕರಹಿತ ಜೀವನ್- ವಿಜಯ್ ಜೋಡಿ ಹಿನ್ನಡೆಯಿಂದ ಚೇತರಿಸಿಕೊಂಡು ಜರ್ಮನಿಯ ಕಾನ್‌ಸ್ಟಂಟೈನ್ ಫ್ರಾಂಟೈನ್- ಹೆಂಡ್ರಿಕ್ ಜೆಬೆನ್ಸ್ ಜೋಡಿಯನ್ನು 4-6, 7-6 (5), 10-7 ರಿಂದ ಸೋಲಿಸಿದರು. ಜರ್ಮನಿಯ ಜೋಡಿ ಸಹ ಶ್ರೇಯಾಂಕ ಪಡೆದಿರಲಿಲ್ಲ.
* 35 ವರ್ಷ ವಯಸ್ಸಿನ ಜೀವನ್ ಅವರಿಗೆ ಇದು ಎರಡನೇ ಎಟಿಪಿ ಟೂರ್ ಪ್ರಶಸ್ತಿ. ಅವರು ಈ ಹಿಂದೆ, 2017ರಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಚೆನ್ನೈ ಓಪನ್‌ನಲ್ಲಿ ವಿಜೇತರಾಗಿದ್ದರು. ಇನ್ನೊಂದೆಡೆ ವಿಜಯ್‌ಗೆ ಒಲಿದ ಮೊದಲ ಎಟಿಪಿ ಪ್ರಶಸ್ತಿಯಿದಾಗಿದೆ.
* ಮೊದಲ ಸೆಟ್ ಅನ್ನು 4-6ರಲ್ಲಿ ಸೋತ ನಂತರ ಭಾರತದ ಜೋಡಿ ಪ್ರತಿರೋಧ ಪ್ರದರ್ಶಿಸಿತು. ಎರಡನೇ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಪಡೆದು, ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಬೆಳೆಸಿದರು. ಇಲ್ಲಿ ಒತ್ತಡದ ನಡುವೆಯೂ ಸಂಯಮ ವಹಿಸಿ ಸೆಟ್ ಹಾಗೂ ಪಂದ್ಯ ತನ್ನದಾಗಿಸಿಕೊಂಡಿತು.
ಹಾಂಗ್ಝೌ ಓಪನ್ ಪುರುಷರ ಟೆನಿಸ್ ಟೂರ್ನಿ 2024 : ಜೀವನ್-ವಿಜಯ್ ಜೋಡಿಗೆ ಪ್ರಶಸ್ತಿ
Published by Yallamma G
25 ಸೆಪ್ಟೆಂಬರ್ 2024