* ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯು (DEPwD) ಗುಜರಾತ್‌ನ ಸೂರತ್‌ನಲ್ಲಿ 'ದಿವ್ಯ ಕಲಾ ಮೇಳ'ವು 2023 ಡಿಸೆಂಬರ್ 29 ರಂದು ಪ್ರಾರಂಭವಾಗಿದ್ದು ಜನವರಿ 7, 2024 ರವರೆಗೆ ನಡೆಯಲಿದೆ.
* ಮೇಳವನ್ನು ರಾಷ್ಟ್ರೀಯ ದಿವ್ಯಾಂಗಜನ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NDFDC) ಸಹ-ಹೋಸ್ಟ್ ಮಾಡುತ್ತದೆ.
* ಇದು ರಾಷ್ಟ್ರದಾದ್ಯಂತದ ವಿಶೇಷಚೇತನ ಉದ್ಯಮಿಗಳ ವೈವಿಧ್ಯಮಯ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವ, ಕುಶಲಕರ್ಮಿಗಳ ಕೌಶಲವನ್ನು ಪ್ರದರ್ಶಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ.
* 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 100 ವಿಶೇಷ ಚೇತನ ಕುಶಲಕರ್ಮಿಗಳು, ಕಲಾವಿದರು ಮತ್ತು ಉದ್ಯಮಿಗಳು ಮೇಳದಲ್ಲಿ ಭಾಗವಹಿಸಿದ್ದಾರೆ.
* ದಿವ್ಯಾಂಗ್ ಕುಶಲಕರ್ಮಿಗಳಿಂದ ವಿಶೇಷ ಸಮರ್ಪಣೆಯೊಂದಿಗೆ ತಯಾರಿಸಿದ ಉತ್ಪನ್ನಗಳು ಪ್ರದರ್ಶನ/ಮಾರಾಟಕ್ಕೆ ಇರುತ್ತವೆ.
* ದೇಶಾದ್ಯಂತ ದಿವ್ಯ ಕಲಾ ಮೇಳ ಕಾರ್ಯಕ್ರಮಗಳನ್ನು ಉತ್ತೇಜಿಸುವ ಗುರಿಯನ್ನು ಇಲಾಖೆ ಹೊಂದಿದೆ.
ಗುರುವಾರ, 04 ಜನವರಿ 2024
5:24 ಅಪರಾಹ್ನ
Daily PDF
ಗುಜರಾತ್‌ನ ಸೂರತ್‌ನಲ್ಲಿ 12ನೇ ದಿವ್ಯ ಕಲಾ ಮೇಳ
Authored by:
Yallamma G