* ಗುಜರಾತ್‌ನ (Gujarat) ಕಛ್‌ನಲ್ಲಿರುವ ಮಾಧಾಪರ್ (Madhapar) ಗ್ರಾಮವು ‘ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
* ಗುಜರಾತ್ ನ ಭುಜ್‌ನ ಹೊರವಲಯದಲ್ಲಿರುವ ಮಾಧಾಪರ್ ಗ್ರಾಮದ ನಿವಾಸಿಗಳು 7,000 ಕೋಟಿ ಮೌಲ್ಯದ ಸ್ಥಿರ ಠೇವಣಿಯನ್ನು ಹೊಂದಿದ್ದಾರೆ. ಮಾಧಾಪರ್‌ನಲ್ಲಿ ‘ಪಟೇಲ್’ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಗ್ರಾಮದ ಜನಸಂಖ್ಯೆಯು ಸುಮಾರು 32,000 ಎಂದು ಅಂದಾಜಿಸಲಾಗಿದೆ. 2011ರಲ್ಲಿ ಈ ಗ್ರಾಮದ ಜನಸಂಖ್ಯೆ 17,000 ಆಗಿತ್ತು.
* ಹೆಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಪಿಎನ್‌ಬಿ, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಮುಂತಾದ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳನ್ನು ಒಳಗೊಂಡಂತೆ ಒಟ್ಟು 17 ಬ್ಯಾಂಕ್‌ಗಳು ಈ ಒಂದೇ ಗ್ರಾಮದಲ್ಲಿದೆ. ಇಷ್ಟು ಮಾತ್ರವಲ್ಲದೇ ಇನ್ನೂ ಹೆಚ್ಚಿನ ಬ್ಯಾಂಕ್‌ಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಆಸಕ್ತಿ ಹೊಂದಿವೆ.
* ಈ ಬೆಳವಣಿಗೆಗೆ ಕಾರಣ ವಿದೇಶದಲ್ಲಿರುವ ಅನಿವಾಸಿ ಭಾರತೀಯರು. ಈ ಗ್ರಾಮದ ಅನೇಕರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿವರ್ಷ ಕೋಟಿಗಟ್ಟಲೆ ಹಣವನ್ನು ತಮ್ಮ ಗ್ರಾಮದ ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ. ಗ್ರಾಮವು ಸುಮಾರು 20,000 ಮನೆಗಳನ್ನು ಹೊಂದಿದೆ. ಅದರಲ್ಲಿ 1,200 ಕುಟುಂಬಗಳು ವಿದೇಶದಲ್ಲಿ ವಾಸಿಸುತ್ತಿವೆ. ಈ ಪೈಕಿ ಆಫ್ರಿಕನ್ ದೇಶಗಳಲ್ಲಿ ಕೆಲಸ ಮಾಡುತ್ತಿರುವವರೇ ಹೆಚ್ಚು. ಇನ್ನೂ ಅನೇಕರು ಯುಕೆ, ಆಸ್ಟ್ರೇಲಿಯಾ, ಅಮೇರಿಕಾ ಮತ್ತು ನ್ಯೂಜಿಲೆಂಡ್‌ನಲ್ಲಿಯೂ ನೆಲೆಸಿದ್ದಾರೆ.
* ಅಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ವಿದೇಶಕ್ಕಿಂತ ಹೆಚ್ಚಾಗಿ ತಮ್ಮ ಹಣವನ್ನು ಮಾಧಾಪರ್ ಗ್ರಾಮದ ಬ್ಯಾಂಕ್‌ಗಳಲ್ಲಿ ಇಡಲು ಬಯಸುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾರುಲ್ಬೆನ್ ಕಾರ ತಿಳಿಸಿದ್ದಾರೆ.
ಗುಜರಾತ್‌ನ ಕಛ್‌ನಲ್ಲಿರುವ ಮಾಧಾಪರ್ ಗ್ರಾಮವು ‘ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ
Published by Yallamma G
23 ಆಗಸ್ಟ್ 2024