* ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಪ್ರಥಮ ಕಾರು ಉತ್ಪಾದನಾ ಘಟಕವನ್ನು ಗುಜರಾತ್‌ನಲ್ಲಿ ಆರಂಭಿಸಲಿದೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ.
* ಜನವರಿ 10 ಮತ್ತು 12ರಂದು ಗುಜರಾತ್‌ನ ಗಾಂಧಿನಗರದಲ್ಲಿ 'ವೈಬ್ರೆಂಟ್ ಗುಜರಾತ್' ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಇಲಾನ್ ಮಸ್ಕ್ ಕೂಡ ಭಾಗವಹಿಸಲಿದ್ದು ಅಂದೇ ಅಧಿಕೃತವಾಗಿ ಘೋಷಿಸಲಿದ್ದಾರೆ.
* ಗುಜರಾತ್ ಸಮಾಚಾರ್ ಮತ್ತು ಇತರ ಮಾಧ್ಯಮಗಳು ಪ್ರಕಟಿಸಿರುವ ವರದಿಗಳ ಪ್ರಕಾರ, ಟೆಸ್ಲಾದ ಉತ್ಪಾದನಾ ಘಟಕವು ಗುಜರಾತ್‌ನ ಸನಂದ್‌ನಲ್ಲಿ ಸ್ಥಾಪನೆಯಾಗುವ ಸಾಧ್ಯತೆ ಇದೆ. ಇಲ್ಲಿ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಮತ್ತು ಎಂಜಿ ಮೋಟಾರ್ ಇಂಡಿಯಾದಂತಹ ಪ್ರಮುಖ ಕಾರು ಕಂಪನಿಗಳ ಘಟಕಗಳಿವೆ.
* ಸ್ಥಾವರವನ್ನು ಸ್ಥಾಪಿಸಲು ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ರಾಜ್ಯವನ್ನು ಆಯ್ಕೆ ಮಾಡುತ್ತದೆ ಮತ್ತು ಈ ನಿಟ್ಟಿನಲ್ಲಿ ಸಂಸ್ಥೆಯೊಂದಿಗೆ ಮಾಹಿತಿ ಸಂವಹನ ನಡೆಸುತ್ತಿದೆ ಎಂದು ಹೃಶಿಕೇಶ್ ಪಟೇಲ್ ತಿಳಿಸಿದ್ದು, ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಭರವಸೆ ಹೊಂದಿದೆ. ಎಲಾನ್ ಮಸ್ಕ್ ಕೂಡ ಗುಜರಾತ್ ಅನ್ನು ತನ್ನ ಮೊದಲ ಆಯ್ಕೆಯಾಗಿ ನೋಡುತ್ತಿದ್ದಾರೆ. ಸ್ಥಾವರವನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವನ್ನು ಹುಡುಕಲು ಅವರು ಭಾರತದಲ್ಲಿ ಸಮೀಕ್ಷೆಯನ್ನು ಪ್ರಾರಂಭಿಸಿದಾಗಿನಿಂದ ಗುಜರಾತ್ ಅವರ ಮನಸ್ಸಿನಲ್ಲಿದೆ ಎಂದು ಹೇಳಿದ್ದಾರೆ.
ಗುಜರಾತ್ ನಲ್ಲಿ ಟೆಸ್ಲಾ ಕಾರು ಘಟಕ ಪ್ರಾರಂಭ
Published by Yallamma G
30 ಡಿಸೆಂಬರ್ 2023