➤ ಭಾರತದ ಮೊದಲ ಹೈಡ್ರೋಜನ್ ರೈಲು: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 17 ರಂದು ಹರಿಯಾಣದ ಜಿಂದ್ - ಸೋನಿಪತ್ ಮಾರ್ಗದಲ್ಲಿ ಚಾಲನೆ ನೀಡಲಿರುವ, 1,200 KW ಸಾಮರ್ಥ್ಯದ ಸ್ವದೇಶಿ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಹೊಂದಿರುವ ಭಾರತದ ಮೊದಲ 10 ಬೋಗಿಗಳ ಹೈಡ್ರೋಜನ್ ರೈಲು, ಪ್ರಸ್ತುತ ವಿಶ್ವದ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
➤ ದೇಶದ 10 ಮಾರ್ಗಗಳಲ್ಲಿ ಹೈಡ್ರೋಜನ್ ಸಾರಿಗೆ ಪೈಲಟ್ ಯೋಜನೆ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಟಾಟಾ ಮೋಟಾರ್ಸ್ ಮತ್ತು ರಿಲಯನ್ಸ್‌ನಂತಹ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ, ₹208 ಕೋಟಿ ವೆಚ್ಚದಲ್ಲಿ ಒಟ್ಟು 37 ಹೈಡ್ರೋಜನ್ ಚಾಲಿತ ಬಸ್ ಮತ್ತು ಟ್ರಕ್‌ಗಳನ್ನು ದೇಶದ 10 ಪ್ರಮುಖ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಿದೆ.
➤ ಹೈಡ್ರೋಜನ್ ಸಾರಿಗೆಯ 10 ಪ್ರಮುಖ ಮಾರ್ಗಗಳು:
- ಗ್ರೇಟರ್ ನೋಯ್ಡಾ - ದೆಹಲಿ - ಆಗ್ರಾ
- ಪುಣೆ - ಮುಂಬೈ
- ಅಹಮದಾಬಾದ್ - ವಡೋದರಾ - ಸೂರತ್
- ಭುವನೇಶ್ವರ - ಕೊನಾರ್ಕ್ - ಪುರಿ
- ಸಾಹಿಬಾಬಾದ್ - ಫರಿದಾಬಾದ್ - ದೆಹಲಿ
- ಜಮ್ಶೆಡ್‌ಪುರ - ಕಳಿಂಗ ನಗರ
- ತಿರುವನಂತಪುರಂ - ಕೊಚ್ಚಿ
- ಕೊಚ್ಚಿ - ಎಡಪಲ್ಲಿ
- ಜಾಮ್‌ನಗರ - ಅಹಮದಾಬಾದ್
- NH-16 ವಿಶಾಖಪಟ್ಟಣಂ - ಬಯ್ಯಾವರಂ