➤ ಇತ್ತೀಚೆಗೆ ಬಿಡುಗಡೆಯಾದ ರ್ಯಾಂಡ್‌ಸ್ಟ್ಯಾಡ್ ಎಂಪ್ಲಾಯರ್ ಬ್ರ್ಯಾಂಡ್ ರಿಸರ್ಚ್ (Randstad Employer Brand Research - REBR) 2026 ರ ವರದಿಯ ಪ್ರಕಾರ, ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಿಗಳ ಪಾಲಿಗೆ ‘ಗೂಗಲ್’ (Google) ಅತ್ಯಂತ ಆಕರ್ಷಕ ಉದ್ಯೋಗದಾತ ಬ್ರ್ಯಾಂಡ್ (Most Attractive Employer Brand) ಆಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಭಾರತದ ಪ್ರಖ್ಯಾತ ಸಂಸ್ಥೆಯಾದ ಟಾಟಾ ಗ್ರೂಪ್ (Tata Group) ಎರಡನೇ ಸ್ಥಾನದಲ್ಲಿದ್ದರೆ, ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಮೂರನೇ ಸ್ಥಾನ ಪಡೆದುಕೊಂಡಿದೆ.
➤ ಭಾರತದ ಟಾಪ್ 10 ಆಕರ್ಷಕ ಉದ್ಯೋಗದಾತ ಸಂಸ್ಥೆಗಳು (Top 10 Employer Brands in India - REBR 2026):
  1. ಗೂಗಲ್ (Google)
  2. ಟಾಟಾ ಗ್ರೂಪ್ (Tata Group)
  3. ಅಮೆಜಾನ್ (Amazon)
  4. ಸ್ಯಾಮ್‌ಸಂಗ್ ಇಂಡಿಯಾ (Samsung India)
  5. ಇನ್ಫೋಸಿಸ್ (Infosys)
  6. ರಿಲಯನ್ಸ್ ಇಂಡಸ್ಟ್ರೀಸ್ (Reliance Industries)
  7. ಐಟಿಸಿ ಗ್ರೂಪ್ (ITC Group)
  8. ಹಿಂದುಸ್ತಾನ್ ಯೂನಿಲಿವರ್ (Hindustan Unilever)
  9. ಮಹೀಂದ್ರಾ ಅಂಡ್ ಮಹೀಂದ್ರಾ (Mahindra & Mahindra)
  10. ಡೆಲ್ ಟೆಕ್ನಾಲಜೀಸ್ (Dell Technologies)
➤ ‘ಸಮತೋಲಿತ ಉದ್ಯೋಗದಾತ’ (Balanced Employer) ಯುಗ: ಭಾರತೀಯ ಉದ್ಯೋಗಿಗಳು ಈಗ ಕೇವಲ ಹೆಚ್ಚಿನ ಸಂಬಳಕ್ಕೆ ಮಾತ್ರ ಆದ್ಯತೆ ನೀಡುತ್ತಿಲ್ಲ. ಉತ್ತಮ ಕೆಲಸ-ಜೀವನದ ಸಮತೋಲನ (Work-Life Balance), ವೃತ್ತಿಜೀವನದ ಬೆಳವಣಿಗೆ (Career Growth), ಕೆಲಸದ ಸ್ಥಳದ ಸಂಸ್ಕೃತಿ ಮತ್ತು ನಮ್ಯತೆಗೆ (Flexibility) ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.ವರದಿಯ ಪ್ರಕಾರ, ಭಾರತದ ಸುಮಾರು 46% ಉದ್ಯೋಗಿಗಳು ಮುಂದಿನ 6 ತಿಂಗಳುಗಳಲ್ಲಿ ಪ್ರಸ್ತುತ ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿದ್ದಾರೆ. ಅಲ್ಲದೆ, ಶೇ 32% ರಷ್ಟು ಜನರು ಕಳೆದ 6 ತಿಂಗಳಲ್ಲಿ ಈಗಾಗಲೇ ಕೆಲಸ ಬದಲಾಯಿಸಿದ್ದಾರೆ.
➤ ಹೈಬ್ರಿಡ್ ಕೆಲಸದ ಮಾದರಿ (Hybrid Work Culture): ಭಾರತದಲ್ಲಿ ಸುಮಾರು 60% ಉದ್ಯೋಗಿಗಳು ಇಂದಿಗೂ ಹೈಬ್ರಿಡ್ (ಆಫೀಸ್ + ವರ್ಕ್ ಫ್ರಮ್ ಹೋಮ್) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.