➤ ಜಾಗತಿಕ ಮಟ್ಟದಲ್ಲಿ ಭ್ರಷ್ಟಾಚಾರದ ಮೇಲೆ ನಿಗಾ ಇಡುವ 'ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್' ಸಂಸ್ಥೆಯು ತನ್ನ ಇತ್ತೀಚಿನ 2025ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (Corruption Perceptions Index) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ಜಗತ್ತಿನ 180ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿನ ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ವಿಶ್ಲೇಷಿಸುತ್ತದೆ. ಭಾರತಕ್ಕೆ 91ನೇ ಸ್ಥಾನ ದೂರಕಿದೆ
➤ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯು 0 ರಿಂದ 100 ರ ಅಳತೆಗೋಲಿನಲ್ಲಿ (0 ಎಂದರೆ ಅತ್ಯಂತ ಭ್ರಷ್ಟ, 100 ಎಂದರೆ ಅತ್ಯಂತ ಸ್ವಚ್ಛ) ಒಟ್ಟು 182 ದೇಶಗಳ ಸಾರ್ವಜನಿಕ ವಲಯದ ಭ್ರಷ್ಟಾಚಾರವನ್ನು ವಿಶ್ಲೇಷಿಸಿದ್ದು, ಈ ವರ್ಷದ ಜಾಗತಿಕ ಸರಾಸರಿ ಅಂಕವು ಕಳೆದ ದಶಕದಲ್ಲೇ ಅತ್ಯಂತ ಕಡಿಮೆ ಮಟ್ಟವಾದ 42 ಕ್ಕೆ ಕುಸಿದಿರುವುದು ಮಾತ್ರವಲ್ಲದೆ, ವಿಶ್ವದ 122 ದೇಶಗಳು 50 ಕ್ಕಿಂತ ಕಡಿಮೆ ಅಂಕಗಳನ್ನು ಪಡೆಯುವ ಮೂಲಕ ಭ್ರಷ್ಟಾಚಾರವು ಇಂದಿಗೂ ಜಾಗತಿಕ ಪಿಡುಗಾಗಿ ಮುಂದುವರಿದಿರುವುದನ್ನು ಎತ್ತಿ ತೋರಿಸಿದೆ.
➤ ಭಾರತದ ಶ್ರೇಯಾಂಕ ಮತ್ತು ಸಾಧನೆ :2025ರ ಸೂಚ್ಯಂಕದಲ್ಲಿ ಭಾರತವು 39 ಅಂಕಗಳೊಂದಿಗೆ 91ನೇ ಶ್ರೇಯಾಂಕವನ್ನು ಪಡೆಯುವ ಮೂಲಕ ಕಳೆದ ವರ್ಷದ 96ನೇ ಸ್ಥಾನಕ್ಕೆ ಹೋಲಿಸಿದರೆ 5 ಸ್ಥಾನಗಳ ಸುಧಾರಣೆ ಕಂಡಿದ್ದರೂ ಸಹ, ದೇಶದ ಸ್ಕೋರ್ ಜಾಗತಿಕ ಸರಾಸರಿಯಾದ 42ಕ್ಕಿಂತ ಕೆಳಗಿದ್ದು, ಆಡಳಿತದಲ್ಲಿನ ಡಿಜಿಟಲೀಕರಣ ಮತ್ತು ಪಾರದರ್ಶಕ ನೀತಿಗಳೇ ಈ ಸಣ್ಣ ಮಟ್ಟದ ಪ್ರಗತಿಗೆ ಮುಖ್ಯ ಕಾರಣವೆಂದು ವಿಶ್ಲೇಷಿಸಲಾಗಿದೆ.
➤ ಅತ್ಯಂತ ಕಡಿಮೆ ಭ್ರಷ್ಟಾಚಾರವಿರುವ ದೇಶಗಳು (Top 5):
1. ಡೆನ್ಮಾರ್ಕ್ (ಅಂಕ 89): ಸತತವಾಗಿ ಮೊದಲ ಸ್ಥಾನ ಕಾಯ್ದುಕೊಂಡಿದೆ.
2. ಫಿನ್ಲೆಂಡ್ (ಅಂಕ 88)
3. ಸಿಂಗಾಪುರ (ಅಂಕ 84)
4. ನ್ಯೂಜಿಲೆಂಡ್ (ಅಂಕ 81)
5. ನಾರ್ವೆ (ಅಂಕ 81)
➤ ಅತ್ಯಂತ ಹೆಚ್ಚು ಭ್ರಷ್ಟಾಚಾರವಿರುವ ದೇಶಗಳು (Bottom 3):
1.ದಕ್ಷಿಣ ಸುಡಾನ್ (ಅಂಕ 9) - ಶ್ರೇಯಾಂಕ 181
2. ಸೊಮಾಲಿಯಾ (ಅಂಕ 9) - ಶ್ರೇಯಾಂಕ 181
3. ವೆನೆಜುವೆಲಾ (ಅಂಕ 10) - ಶ್ರೇಯಾಂಕ 180
ಗುರುವಾರ, 12 ಫೆಬ್ರುವರಿ 2026
11:13 ಪೂರ್ವಾಹ್ನ
Daily PDF
2025ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI) ಬಿಡುಗಡೆ: ಭಾರತಕ್ಕೆ 91ನೇ ಸ್ಥಾನ
Authored by:
Yallamma G