* ಸಿಐಎಸ್ಎಫ್(ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಗೀತಾ ಸಮೋಟಾ ಅವರು ಮೇ 19 ರಂದು (ಸೋಮವಾರ) ವಿಶ್ವದ ಅತ್ತ್ಯನ್ನತ ಶಿಖರ 8849 ಮೀಟರ್ ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ಗೀತಾ ಸಮೋಟಾ ಅವರ ಸಾಧನೆಯನ್ನು ಸಿಐಎಸ್ ಎಫ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಂಭ್ರಮಿಸಿದ್ದಾರೆ. ಕೈಗಾರಿಕಾ ಭದ್ರತಾ ಪಡೆ ಮುಂದಿನ ವರ್ಷ ಮೌಂಟ್ ಎವರೆಸ್ಟ್ ಗೆ ಪ್ರತ್ಯೇಕ ತಂಡವನ್ನೇ ಕಳುಹಿಸಲು ನಿರ್ಧರಿಸಿದ್ದು, ಇದಕ್ಕೂ ಮುನ್ನವೇ ತಮ್ಮದೇ ಪಡೆಯ ಮಹಿಳಾ ಸಬ್ ಸಬ್ ಇನ್ಸ್‌ಪೆಕ್ಟರ್ ಈ ಸಾಧನೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹರ್ಷ ವ್ಯಕ್ತಪಡಿಸಿದರು.
* 35 ವರ್ಷದ ಸಬ್ ಇನ್ಸ್‌ಪೆಕ್ಟರ್ 2011 ರಲ್ಲಿ ಅರೆಸೈನಿಕ ಪಡೆಗೆ ಸೇರಿದರು ಮತ್ತು ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನ ಉದಯಪುರ ವಿಮಾನ ನಿಲ್ದಾಣ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
* ತಮ್ಮ ಶ್ರೇಷ್ಠ ಸಾಧನೆಗಳಿಗಾಗಿ ಗೀತಾ ಹಲವು ಪ್ರಮುಖ ಗೌರವಗಳನ್ನೂ ಸ್ವೀಕರಿಸಿದ್ದಾರೆ. ಇವುಗಳ ಪೈಕಿ, ದೆಹಲಿ ಮಹಿಳಾ ಆಯೋಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಶಸ್ತಿ, 2023, ಕೇಂದ್ರ ವಿಮಾನಯಾನ ಸಚಿವಾಲಯದಿಂದ ಗಿವಿಂಗ್ ವಿಂಗ್ಸ್ ಟು ಡ್ರೀಮ್ಸ್, 2023 ಪ್ರಶಸ್ತಿ ಪಡೆದಿದ್ದಾರೆ.
* ಗೀತಾ ಸಮೋಟಾ ಸಾಧನೆಯ 'ಶಿಖರ':
- 2019ರಲ್ಲಿ ಉತ್ತರಾಖಂಡದ ಮೌಂಟ್ ಸತೋಪಂತ್ (7,075 ಮೀಟರ್) ಮತ್ತು ನೇಪಾಳದ ಮೌಂಟ್ ಲೋಬುಚೆ (6,119 ಮೀಟರ್) ಏರಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF)ಯ ಮೊದಲ ಮಹಿಳೆ.
- 2021 ಮತ್ತು 2022ರ ನಡುವೆ, ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯುಸ್ಕೊ (2,228 ಮೀ), ರಷ್ಯಾದ ಮೌಂಟ್ ಎಲ್ಬ್ರಸ್ (5,642 ಮೀ), ತಾಂಜಾನಿಯಾದಲ್ಲಿ ಮೌಂಟ್ ಕಿಲಿಮಂಜಾರೊ (5,895 ಮೀ) ಮತ್ತು ಅರ್ಜೆಂಟೀನಾದಲ್ಲಿ ಮೌಂಟ್ ಅಕಾನ್ಕಾಗುವಾ (6,961 ಮೀ) ಹತ್ತಿದ ಕೀರ್ತಿ.
- ಕೇವಲ ಆರು ತಿಂಗಳು ಮತ್ತು 27 ದಿನಗಳಲ್ಲೇ ಜಗತ್ತಿನ ಪ್ರಮುಖ 'ಏಳು ಶಿಖರ'ಗಳ ಪೈಕಿ ನಾಲ್ಕನ್ನು ಅತ್ಯಂತ ವೇಗವಾಗಿ ಹತ್ತಿದ ಭಾರತೀಯ ಮಹಿಳೆ.
- ಲಡಾಖ್‌ನ ರುಪ್ಶು ಪ್ರದೇಶದಲ್ಲಿ ಕೇವಲ ಮೂರೇ ದಿನಗಳಲ್ಲಿ ಐದು ಶಿಖರಗಳನ್ನು ಏರಿದ ಮೊದಲ ಮತ್ತು ವೇಗದ ಮಹಿಳೆ ಎಂಬ ಹಿರಿಮೆ. ಇದರಲ್ಲಿ 6,000 ಮೀಟರ್‌ಗಿಂತ ಹೆಚ್ಚಿನ ಮೂರು ಮತ್ತು 5,000 ಮೀಟರ್‌ಗಿಂತ ಹೆಚ್ಚಿನ ಎರಡು ಶಿಖರಗಳಿವೆ.
ಗುರುವಾರ, 22 ಮೇ 2025
11:25 ಪೂರ್ವಾಹ್ನ
Daily PDF
ಗೀತಾ ಸಮೋಟಾ: ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಸಿಐಎಸ್ಎಫ್ ಅಧಿಕಾರಿ
Authored by:
Jyoti Angadi