➤ ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ‘ಎರಡನೇ ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನ’ (ESTIC 2026) ಅನ್ನು ನವದೆಹಲಿಯ ಪ್ರಸಿದ್ಧ ಭಾರತ ಮಂಟಪದಲ್ಲಿ (Bharat Mandapam) ಆಯೋಜಿಸಲಾಗಿದೆ.
- ಕಾರ್ಯಕ್ರಮದ ಹೆಸರು: 2ನೇ ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನ (2nd Emerging Science, Technology, and Innovation Conclave - ESTIC 2026)
- ದಿನಾಂಕ: ಅಕ್ಟೋಬರ್ 27 ರಿಂದ 29, 2026
- ಸ್ಥಳ: ಭಾರತ ಮಂಟಪಂ, ನವದೆಹಲಿ
- ಉದ್ಘಾಟನೆ: ಪ್ರಧಾನಮಂತ್ರಿ ನರೇಂದ್ರ ಮೋದಿ
- ಸಂಘಟನಾ ಸಂಸ್ಥೆ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) - ಕೇಂದ್ರ ಸರ್ಕಾರದ 13 ಸಚಿವಾಲಯಗಳ ಸಹಯೋಗದೊಂದಿಗೆ.
- ಮಾರ್ಗದರ್ಶನ: ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ (Principal Scientific Adviser) ಪ್ರೊ. ಅಜಯ್ ಕುಮಾರ್ ಸೂದ್ ಅವರ ನೇತೃತ್ವದಲ್ಲಿ.
➤ ESTIC 2026 ರ ಪ್ರಮುಖ ಥೀಮ್ (Theme): ಸೃಜನಶೀಲ ಮನಸ್ಸುಗಳು, ವಿಜ್ಞಾನದ ವೇಗವರ್ಧನೆ, ತಂತ್ರಜ್ಞಾನಗಳ ಸಬಲೀಕರಣ
“Creative Minds, Catalyzing Science, Empowering Technologies”
➤ ಗಮನಹರಿಸಲಾಗುವ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳು:
1. ಸೆಮಿಕಂಡಕ್ಟರ್‌ಗಳು (Semiconductors)
2. ಕೃತಕ ಬುದ್ಧಿಮತ್ತೆ (Artificial Intelligence - AI)
3. ರೋಬೋಟಿಕ್ಸ್ (Robotics)
4. ಕ್ವಾಂಟಮ್ ಕಮ್ಯುನಿಕೇಷನ್ (Quantum Communication)
5. ಬಾಹ್ಯಾಕಾಶ ತಂತ್ರಜ್ಞಾನ (Space Technology)
6. ಕೃಷಿ-ತಂತ್ರಜ್ಞಾನ (Agri-Tech)
ಮತ್ತು ಇತರ ಉದಯೋನ್ಮುಖ ವಿಜ್ಞಾನ ಕ್ಷೇತ್ರಗಳು.
➤ ಈ ಸಮಾವೇಶದಲ್ಲಿ ಮೂರು ಪ್ರಸಿದ್ಧ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು ಭಾಗವಹಿಸಲಿದ್ದಾರೆ:
1. ಪ್ರೊ. ಜೊವಾಕಿಮ್ ಫ್ರಾಂಕ್ (Prof. Joachim Frank)
2. ಸರ್ ರಿಚರ್ಡ್ ಜೆ. ರಾಬರ್ಟ್ಸ್ (Sir Richard J. Roberts)
3. ಪ್ರೊ. ಕೊಸ್ಟ್ಯಾ ನೊವೊಸೆಲೋವ್ (Prof. Kostya Novoselov)
ಅಲ್ಲದೆ, ಜಾಗತಿಕ ಮಟ್ಟದ ಪ್ರಶಸ್ತಿ ವಿಜೇತ ವಿಜ್ಞಾನಿಗಳು ಹಾಗೂ ಯುವ ಸಂಶೋಧಕರು ತಮ್ಮ ಸಂಶೋಧನಾ ಪ್ರಬಂಧಗಳನ್ನು (Abstracts) ಮಂಡಿಸಲು ಸೆಪ್ಟೆಂಬರ್ 15, 2026 ರವರೆಗೆ ಅವಕಾಶ ನೀಡಲಾಗಿದೆ.
ಶನಿವಾರ, 12 ಸೆಪ್ಟೆಂಬರ್ 2026
10:47 ಪೂರ್ವಾಹ್ನ
Daily PDF
ESTIC 2026: ನವದೆಹಲಿಯ ಭಾರತ ಮಂಟಪದಲ್ಲಿ ಹೊರಹೊಮ್ಮುತ್ತಿರುವ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನ
Authored by:
Akshata Halli