* ಲಿಂಡಾ ಯಾಕರಿನೊ (Linda Yaccarino ) ಎಲಾನ್ ಮಸ್ಕ್ (Elon Musk) ಒಡೆತನದ ಎಕ್ಸ್ ಸಾಮಾಜಿಕ ಜಾಲತಾಣ ಸಂಸ್ಥೆಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
* ಲಿಂಡಾ ಯಾಕರಿನೊ ಕಳೆದ 2 ವರ್ಷಗಳಿಂದ ಎಕ್ಸ್ ಸಂಸ್ಥೆಯ ಸಿಇಒ ಹುದ್ದೆಯಲ್ಲಿದ್ದರು.
* 2023ರ ಜೂನ್ ನಲ್ಲಿ ಟ್ವಿಟರ್‌ನ ಸಿಇಒ ಆಗಿ ಲಿಂಡಾ ಯಾಕಾರಿನೊ ಅವರು ನೇಮಕಗೊಂಡಿದ್ದರು. ಇದಕ್ಕೂ ಮುನ್ನ ಅವರು 2011ರಿಂದಲೂ ಎನ್ ಬಿ ಸಿ ಯೂನಿವರ್ಸಲ್ ನ ಜಾಹೀರಾತು ಮತ್ತು ಪಾಲುದಾರಿಕೆ ವಿಭಾಗದ ಕಾರ್ಯ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದರು.
* 2022ರಲ್ಲಿ ಟ್ವಿಟರ್ ಖರೀದಿಸಿದ್ದ ಮಸ್ಕ್, ಸಿಇಒ ಆಗಿದ್ದ ಭಾರತದ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸಿ ತಾವೇ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಆರು ವಾರಗಳ ಬಳಿಕ ಲಿಂಡಾ ಸಿಇಒ ಆಗಿ ಅಧಿಕಾರ ಸ್ವೀಕರಿದ್ದರು.
'ಎಕ್ಸ್’ ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ
Published by Jyoti Angadi
11 ಜುಲೈ 2025