* ಸೆಪ್ಟೆಂಬರ್ 1 ಭಾನುವಾರ ರಂದು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡದವರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಫೈನಲ್‌ನಲ್ಲಿ 2-3 ರಿಂದ ಚೀನಾ ಕೈಯಲ್ಲಿ ಪರಾಭವಗೊಂಡರು.
* ಫೈನಲ್‌ನಲ್ಲಿ ಭಾರತ 2-0 ಯಿಂದ ಮುನ್ನಡೆ ಸಾಧಿಸಿತ್ತು. ಮರುಹೋರಾಟ ನಡೆಸಿದ ಚೀನಾ, ಮುಂದಿನ ಮೂರೂ ಪಂದ್ಯಗಳನ್ನು ಪಂದ್ಯಗಳನ್ನು ಗೆದ್ದು ಚಿನ್ನಕ್ಕೆ ಮುತ್ತಿಟ್ಟಿತು.
* ಮೊದಲ ಸಿಂಗಲ್ಸ್‌ನಲ್ಲಿ ಲಕ್ಷ್ಯಸೇನ್ 22-20, 14-21, 21-18 ರಿಂದ ಶಿ ಯುಗಿ ಅವರನ್ನು ಸೋಲಿಸಿದರು. ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ- ಚಿರಾಗ್ ಶೆಟ್ಟಿ 21-15, 21-18 ರಿಂದ ಲಿಯಾಂಗ್ ವಿ ಕಿಂಗ್ ವಾಂಗ್ ಚಾಂಗ್ ವಿರುದ್ಧ ಗೆದ್ದು ಭಾರತಕ್ಕೆ 2-0 ಮೇಲುಗೈ ಸಾಧಿಸಿದರು.
* ಎರಡನೇ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ 22-24, 9-21 ರಿಂದ ಆಲ್ ಇಂಗ್ಲೆಂಡ್ ಚಾಂಪಿಯನ್ ಲಿ ಶಿಫೆಂಗ್ ಎದುರು ಸೋತರು. ಶ್ರೀಕಾಂತ್ ಮೊದಲ ಗೇಮ್‌ನಲ್ಲಿ 18-14 ರಿಂದ ಮುನ್ನಡೆಯನ್ನು ಸಾಧಿಸಿದರು.
ಸೋಮವಾರ, 02 ಅಕ್ಟೋಬರ್ 2023
8:36 ಪೂರ್ವಾಹ್ನ
Daily PDF
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಬೆಳ್ಳಿ ಪದಕ
Authored by:
Bhagya R K