* ಢಾಕಾ (ಪಿಟಿಐ) ದಲ್ಲಿ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್ ಷಿಪ್ 2025 ರಲ್ಲಿ ಭಾರತ ಕಾಂಪೌಂಡ್ ಆರ್ಚರಿ ತಂಡ ಏಷ್ಯನ್ ಚಾಂಪಿಯನ್‌ಷಿಪ್ ನಲ್ಲಿ ಗುರುವಾರ (ನ.13) ಅಮೋಘ ಪ್ರದರ್ಶನ ನೀಡಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿತು.
* 29 ವರ್ಷ ವಯಸ್ಸಿನ ಜ್ಯೋತಿ ಅವರು ಕಾಂಪೌಂಡ್ ವಿಭಾಗದಲ್ಲಿ ವೈಯಕ್ತಿಕ ಚಿನ್ನ ಗೆದ್ದರಲ್ಲದೇ, ತಂಡ ವಿಭಾಗದಲ್ಲೂ ಚಿನ್ನ ಗೆಲ್ಲಲು ನೆರವಾದರು.
* ದೀಷ್ಠಿಕಾ, ಪ್ರತೀಕಾ ಪ್ರದೀಪ್ ಅವರ ಜೊತೆಗೂಡಿದ ಜ್ಯೋತಿ ತಂಡ ವಿಭಾಗದ ಫೈನಲ್‌ನಲ್ಲಿ 236-234 ರಿಂದ ದಕ್ಷಿಣ ಕೊರಿಯಾವನ್ನು (ಪಾರ್ಕ್ ಯೆರಿನ್, ಒಹ್ ಯೂಹ್ಯುನ್, ಜುಂಗ್‌ಯೂನ್ ಪಾರ್ಕ್) ಸೋಲಿಸಲು ನೆರವಾದರು.
* ಭಾರತೀಯ ಬಿಲ್ಲಾರ್ತಿಯರ ವೈಯಕ್ತಿಕ ವ್ಯವಹಾರವಾಗಿದ್ದ ಫೈನಲ್‌ನಲ್ಲಿ ಜ್ಯೋತಿ, 17 ವರ್ಷ ವಯಸ್ಸಿನ ಪ್ರತೀಕಾ ಅವರಿಂದ ಕಠಿಣ ಸವಾಲು ಎದುರಿಸಿದರೂ ಅಂತಿಮವಾಗಿ 147-145 ರಲ್ಲಿ ಗೆದ್ದರು.
* ಕಾಂಪೌಂಡ್ ಮಿಶ್ರ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್ ವರ್ಮಾ-ದೀಪಿಕಾ ಜೋಡಿ 153-151 ರಿಂದ ಬಾಂಗ್ಲಾದೇಶದ ಜೋಡಿಯನ್ನು ಸೋಲಿಸಿ ಭಾರತ ಮತ್ತೊಂದು ಚಿನ್ನ ತನ್ನದಾಗಿಸಿಕೊಂಡಿತು.
* ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ 229-230ರಲ್ಲಿ ಕಜಾಕಸ್ತಾನ ತಂಡಕ್ಕೆ ಸೋತು ಬೆಳ್ಳಿ ಪದಕ ಗಳಿಸಿತು. ಅಭಿಷೇಕ್ ವರ್ಮಾ, ಸಾಹಿಲ್ ರಾಜೇಶ್ ಜಾಧವ್, ಪ್ರಥಮೇಶ ಬಾಲಚಂದ್ರ ಫುಗೆ ತಂಡದಲ್ಲಿದ್ದರು.
ಶುಕ್ರವಾರ, 14 ನವೆಂಬರ್ 2025
11:12 ಪೂರ್ವಾಹ್ನ
Daily PDF
ಏಷ್ಯನ್ ಆರ್ಚರಿ ಚಾಂಪಿಯನ್ ಷಿಪ್ 2025 : ಭಾರತಕ್ಕೆ 3 ಚಿನ್ನ
Authored by:
Yallamma G