* ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಎರಡನೇ ಪ್ರದೇಶ ಚಿತ್ರದುರ್ಗದ 'ಜೋಗಿಮಟ್ಟಿ' ಗಿರಿಧಾಮವಾಗಿದೆ. ಮಿನಿ ಊಟಿಯ ಖ್ಯಾತಿ ಈ ಜೋಗಿಮಟ್ಟಿಗೆ ಇದೆ.
* ಕೇರಳದ ಇಡುಕ್ಕಿ ಜಿಲ್ಲೆಯ ರಾಮಕ್ಕಲ್ಮೇಡು ಏಷ್ಯಾದ ಅತ್ಯಂತ ಗಾಳಿ ಬೀಸುವ ಮೊದಲನೇ ಸ್ಥಳವಾಗಿದೆ.
* ಚಿತ್ರದುರ್ಗದ 'ಜೋಗಿಮಟ್ಟಿ ಎತ್ತರದ ಗಿರಿಧಾಮ, ಹಚ್ಚ ಹಸಿರಿನ ಸೊಬಗಿನಿಂದ ಮಲೆನಾಡನ್ನೇ ನಾಚಿಸುವಂತೆ ಆಕರ್ಷಿಸುತಿದ್ದ ಪ್ರವಾಸಿಧಾಮ. ಆದ್ರೆ ಬೇಸಿಗೆ ಆರಂಭವಾದ ಬೆನ್ನಲ್ಲೇ ಆ ಪ್ರವಾಸಿ ತಾಣದ ಎಂಟ್ರಿಗೆ ಅರಣ್ಯಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಹೀಗಾಗಿ ಪ್ರವಾಸಿತಾಣ ಬಿಕೋ ಎನ್ನುತ್ತಿದೆ.
* ಒಟ್ಟಾರೆ ಬೇಸಿಗೆ ಆರಂಭದಲ್ಲೇ ಜೋಗಿಮಟ್ಟಿ ಒಣಗಿದ ಮರುಭೂಮಿ ಯಾಗಿದೆ. ಹೀಗಾಗಿ ಬೆಂಕಿ ಅವಘಡದಿಂದ ಗಿರಿಧಾಮವನ್ನು ಸಂರಕ್ಷಿಸಲು ಪ್ರವಾಸಿಗರ ಪ್ರವೇಶಕ್ಕೆ ನಿಷೇಧಾಜ್ಞೆ ಜಾರಿಯಾಗಿದೆ. ಹೀಗಾಗಿ ಪ್ರವಾಸಿ ತಾಣ ಬಿಕೊಎನ್ನುತ್ತಿದ್ದು,ಬೇಸಿಗೆ ಕಳೆದ ಬಳಿಕ ಪ್ರವಾಸಿಗರು ಇಲ್ಲಿನ ನೈಸರ್ಗಿಕ ಸೊಬಗನ್ನು ಸವಿಯಲು ಮುಕ್ತವಾಗಲಿದೆ.
ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಎರಡನೇ ಪ್ರದೇಶ : ಚಿತ್ರದುರ್ಗದ 'ಜೋಗಿಮಟ್ಟಿ' ಗಿರಿಧಾಮ
Published by Yallamma G
13 ಫೆಬ್ರವರಿ 2024