* ಪ್ರತಿಷ್ಠಿತ ಫೈಟರ್ ಪೈಲಟ್ ಆಗಿರುವ ಏರ್ ಮಾರ್ಷಲ್ ಎಸ್ ಪಿ ಧಾರ್ಕರ್ [ಸುಜೀತ್ ಪುಷ್ಪಾಕರ್ ಧಾರ್ಕರ್] ಅವರನ್ನು ವಾಯುಪಡೆಯ ಮುಂದಿನ ಉಪ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅವರು ಏರ್ ಸ್ಟಾಫ್ ಮುಖ್ಯಸ್ಥರಾಗಲಿರುವ ಏರ್ ಮಾರ್ಷಲ್ ಎಪಿ ಸಿಂಗ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
* ಹೊಸ ಏರ್ ಫೋರ್ಸ್ ಮುಖ್ಯಸ್ಥ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಸೆಪ್ಟೆಂಬರ್ 30 ರಂದು ಅಧಿಕಾರ ವಹಿಸಿಕೊಂಡ ನಂತರ ಧಾರ್ಕರ್ ಅವರ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಕಳೆದ ವಾರ ಮುಂದಿನ ವಾಯುಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಧಾರ್ಕರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
- ಭೂಸೇನೆ ಮುಖ್ಯಸ್ಥರು :- ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ
- ಭೂಸೇನೆ ಉಪಮುಖ್ಯಸ್ಥರು :- ಲೆಫ್ಟಿನೆಂಟ್ ಜನರಲ್ ಎನ್ ಎಸ್ ರಾಜಾ ಸುಬ್ರಮಣಿ
- ವಾಯು ಸೇನೆ ಮುಖ್ಯಸ್ಥರು :- ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಸೆ. 30 ರಿಂದ ಅಮರ್ ಪ್ರೀತ್ ಸಿಂಗ್ ಅವರು
- ವಾಯುಸೇನೆ ಉಪಮುಖ್ಯಸ್ಥರು :- ಏರ್ ಮಾರ್ಷಲ್ ಸುಜೀತ್ ಪುಷ್ಪಾಕರ್ ಧಾರ್ಕರ್ (SP Dharkar)
- ನೌಕಾಪಡೆಯ ಮುಖ್ಯಸ್ಥರು :- ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ
- ನೌಕಾಪಡೆಯ ಉಪಮುಖ್ಯಸ್ಥರು :- ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್
ಏರ್ ಮಾರ್ಷಲ್ ಎಸ್ಪಿ ಧಾರ್ಕರ್ ಅವರು ಭಾರತೀಯ ವಾಯುಪಡೆಯ ಮುಂದಿನ ಉಪ ಮುಖ್ಯಸ್ಥರಾಗಿ ನೇಮಕ
Published by Yallamma G
27 ಸೆಪ್ಟೆಂಬರ್ 2024