* ವಿಸ್ತಾರಾ ಏರ್ ಲೈನ್ಸ್ ನವೆಂಬರ್ 12 ರಂದು ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ ಇದು ತನ್ನ ದಶಕದ ಸುದೀರ್ಘ ಪ್ರಯಾಣವನ್ನು ಕೊನೆಗೊಳಿಸುತ್ತದೆ. ಏರ್ ಇಂಡಿಯಾ ಸಮೂಹದಲ್ಲಿ ಸಿಂಗಾಪುರ್ ಏರ್‌ಲೈನ್ಸ್ (ಎಸ್‌ಐಎ) ₹ 2058 ಕೋಟಿ ಹೂಡಿಕೆಯನ್ನು ಕೇಂದ್ರ ತೆರವುಗೊಳಿಸಿದ ನಂತರ ವಿಲೀನ ದಿನಾಂಕವನ್ನು ಘೋಷಿಸಲಾಯಿತು.
* ವಿಸ್ತಾರ ಎನ್ನುವ ಬ್ರಾಂಡ್ ನಡಿ ನವೆಂಬರ್ 11 ರಂದು ಕೊನೆಯ ಬಾರಿಗೆ ವಿಮಾನ ಕಾರ್ಯಾಚರಣೆ ನಡೆಸಲಿದೆ. ವಿಸ್ತಾರಾ ಏರ್ ಲೈನ್ಸ್ ಸಂಸ್ಥೆಯು ಟಾಟಾ ಸಮೂಹ ಹಾಗೂ ಸಿಂಗಾಪುರ ಏರ್ ಲೈನ್ಸ್ ಜಂಟಿ ಮಾಲೀಕತ್ವದಲ್ಲಿದೆ. ಏರ್ ಇಂಡಿಯಾ ದೊಂದಿಗೆ ವಿಲೀನ ಗೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
* ವಿಸ್ತಾರಾ ಏರ್ ಲೈನ್ಸ್‌ನಲ್ಲಿ ನವೆಂಬರ್ 12 ಅಥವಾ ಅದರ ಬಳಿಕದ ದಿನಾಂಕಗಳಿಗೆ ಬುಕಿಂಗ್ ಸ್ವೀಕರಿಸಲಾಗುವುದಿಲ್ಲ. ಅ ಬಳಿಕ ಏರ್ ಇಂಡಿಯಾವು ಈ ವಿಮಾನಗಳ ನಿರ್ವಹಣೆ ಮಾಡಲಿದ್ದು ವಿಸ್ತಾರಾ ಕಾರ್ಯಾಚರಿಸುತ್ತಿದ್ದ ವಿಮಾನ ಮಾರ್ಗಗಳ ಬುಕಿಂಗ್ ಏರ್ ಇಂಡಿಯಾ ವೆಬ್‌ಸೈಟ್‌ಗೆ ವರ್ಗಾವಣೆ ಯಾಗಲಿದೆ. ನವೆಂಬರ್ 11ರವರೆಗೆ ಎಂದಿನಂತೆ ವಿಸ್ತಾರಾದ ಕಾರ್ಯಾಚರಣೆ ಇರಲಿದೆ ಎಂದು ವಿಮಾನಯಾನ ನ ಸಂಸ್ಥೆ ಹೇಳಿದೆ.
* ವಿಸ್ತಾರಾ-ಏರ್ ಇಂಡಿಯಾ ವಿಲೀನ 2022ರ ನವೆಂಬರ್‌ನಲ್ಲಿ ಘೋಷಿಸಲಾಗಿತ್ತು. ವಿಲೀನದ ಬಳಿಕ ಸಿಂಗಪುರ ಏರ್‌ಲೈನ್ಸ್ ಸಂಸ್ಥೆಯು ಏರ್ ಇಂಡಿಯಾದಲ್ಲಿ ಶೇ 25.1ರಷ್ಟು ಪಾಲು ಹೊಂದಿರಲಿದೆ. ಸದ್ಯ ಏರ್ ಇಂಡಿಯಾ ಸಂಸ್ಥೆಯು ಟಾಟಾ ಸಮೂಹದ ಒಡೆತನದಲ್ಲಿದೆ.
ಶನಿವಾರ, 31 ಆಗಸ್ಟ್ 2024
11:55 ಪೂರ್ವಾಹ್ನ
Daily PDF
ಏರ್ ಇಂಡಿಯಾದೊಂದಿಗೆ ವಿಸ್ತಾರಾ ಏರ್ ಲೈನ್ಸ್ ವಿಲೀನ
Authored by:
Yallamma G