* ದೇಶೀಯ ಸೇವೆ ಏರ್ ಇಂಡಿಯಾವು ಎಐ ವರ್ಚುವಲ್ ಏಜೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ವಿಶ್ವದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ.
* ಟಾಟಾ ಸನ್ಸ್ ಮಾಲೀಕತ್ವದ ಏರ್‌ಲೈನ್ ಕಂಪನಿಯು ಎಐ ಆಧರಿತ ಏಜೆಂಟ್ ಅನ್ನು 2023ರ ಮಾರ್ಚ್‌ನಲ್ಲಿ ಆರಂಭಿಸಿತು. ಎಐ ಆಧರಿತ ಏಜೆಂಟ್ ಒಂದು ದಿನದಲ್ಲಿ ನಾಲ್ಕು ಭಾಷೆಗಳಲ್ಲಿ (ಹಿಂದಿ,ಇಂಗ್ಲಿಷ್, ಫ್ರೆಂಚ್, ಜರ್ಮನ್) 6 ಸಾವಿರ ಪ್ರಶ್ನೆಗಳಿಗೆ ಉತ್ತರಿಸಲಿದೆ. ಈ ಪೈಕಿ ಶೇ.80ರಷ್ಟು ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲೇ ಉತ್ತರಿಸಲಿದೆ.
* ಶೇ.15ರಷ್ಟು ಗ್ರಾಹಕರ ಪ್ರಶ್ನೆಗಳಿಗೆ ಹೆಚ್ಚುವರಿ ಸಹಾಯದ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಅಝರ್ ಓಪನ್ ಎಐನಿಂದ ನಡೆಸಲ್ಪಡುವ ಏರ್ ಇಂಡಿಯಾದ ಮಹಾರಾಜ ಎಐ ಏಜೆಂಟ್, ಪ್ರಾಯೋಗಿಕವಾಗಿ ಈಗಾಗಲೇ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದೆ. ಈ ಏಜೆಂಟ್ 1,300 ವಿಷಯಗಳಲ್ಲಿ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಲಿದೆ.
ಗುರುವಾರ, 16 ನವೆಂಬರ್ 2023
10:33 ಪೂರ್ವಾಹ್ನ
Daily PDF
ಏರ್ ಇಂಡಿಯಾ AI ಏಜೆಂಟ್ ಯಶಸ್ವಿ ಅಳವಡಿಕೆ
Authored by:
Tajabi Pathan