* ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ.
* ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂಲ ಹೆಸರು ಭೀಮರಾವ್ ರಾಮ್ ಜಿ ಅಂಬೇಡ್ಕರ್. ಅವರು ಏಪ್ರಿಲ್ 14 1891 ರಂದು ಈಗಿನ ಮಧ್ಯಪ್ರದೇಶದಲ್ಲಿರುವ ಮಾಹುದಲ್ಲಿ ಜನಿಸಿದರು. ಆ ಸಮಯದಲ್ಲಿ ಅತಿದೊಡ್ಡ ಅಸ್ಪೃಶ್ಯ ಜಾತಿಯಾದ ಮಹಾರರ ಕುಟುಂಬದಲ್ಲಿ ಜನಿಸಿದರು. ತಂದೆ ರಾಮಜಿ ಸತ್ಪಾಲ್ ಮತ್ತು ತಾಯಿ ಭೀಮಬಾಯಿ ಗೆ 14ನೇ ಮಗನಾಗಿ ಜನಿಸಿದರು.
* ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ಭಾರತೀಯರ ಪಾಲಿಗೆ ಸಾರ್ವಕಾಲಿಕ ಸಕಾಲಿಕ ಎನ್ನಬಹುದು. ಸಮಾನತೆ ಪ್ರಗತಿಯ ಕನಸು ಕಂಡ ಮೇರು ನಾಯಕ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ.
* ಅಂಬೇಡ್ಕರ್ ರವರು 1927 ರ ಜೂನ್ 8 ರಂದು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅವರು ತಮ್ಮ ಜೀವನದಲ್ಲಿ ಮುಖ್ಯವಾಗಿ ಹೋರಾಟ ನಡೆಸಿದ್ದು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ವಿರುದ್ಧ. 1920 ರಲ್ಲಿ ಬಿ. ಆರ್. ಅಂಬೇಡ್ಕರ್ ಅವರು 'ಮೂಕನಾಯಕ' ಎಂಬ ಪತ್ರಿಕೆಯನ್ನು ಆರಂಭಿಸಿದರು.
* 29 ಆಗಸ್ಟ್ 1947 ರಂದು, ಅವರು ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು, ಅಂಬೇಡ್ಕರ್ ಅವರು ಸಂವಿಧಾನದ ಅಂತಿಮ ಕರಡು ಪ್ರತಿ ಸಿದ್ಧಪಡಿಸಲು 2 ವರ್ಷ 11 ತಿಂಗಳು 18 ದಿನಗಳನ್ನು ತೆಗೆದುಕೊಂಡರು.
* ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದರು. ಭಾರತದ ಬೃಹತ್ ಸಂವಿಧಾನಕ್ಕೆ ಅಪಾರ ಕೊಡುಗೆ, ಶ್ರಮ ಹಾಕಿದ್ದ ಇವರನ್ನು ಭಾರತೀಯ ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ.
* ಪ್ರಶಸ್ತಿಗಳು / ಗೌರವಗಳು:
- ಬೋಧಿಸತ್ವ (1956)
- ಭಾರತ್ ರತ್ನ (1990)
- The Greatest Indian (2012)
* ರಾಜಕೀಯ ಪಕ್ಷಗಳು:
- ಪರಿಶಿಷ್ಟ ಜಾತಿ ಒಕ್ಕೂಟ
- ಸ್ವತಂತ್ರ ಕಾರ್ಮಿಕ ಪಕ್ಷ
ರವಿವಾರ, 14 ಎಪ್ರಿಲ್ 2024
10:58 ಪೂರ್ವಾಹ್ನ
Daily PDF
ಏಪ್ರಿಲ್ 14 'ಸಂವಿಧಾನ ಶಿಲ್ಪಿ' ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
Authored by:
Akshata Halli