* 2024ರ ಅಂತ್ಯದ ವೇಳೆಗೆ ಭಾರತೀಯ ರೈಲ್ವೆ ಇಲಾಖೆಯು ಸಂಪೂರ್ಣ ವಿದ್ಯುತ್ತೀಕರಣದ ಗುರಿ ಹೊಂದಿದ್ದು ಎಲ್ಲಾ ರೈಲುಗಳು ವಿದ್ಯುತ್‌ಗೆ ಬದಲಾಗಲಿವೆ.
* ಕೇಂದ್ರ ಸರಕಾರವು ಇತ್ತೀಚಿಗೆ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆಯ ವಿದ್ಯುದ್ದೀಕರಣಕ್ಕೆ 6,500 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಮೂಲಕ ಭಾರತದ ಎಲ್ಲ ರೈಲುಗಳಲ್ಲಿ ಕಲ್ಲಿದ್ದಲು ಅಥವಾ ಇತರೆ ಇಂಧನ ಬಳಸುವ ಬದಲು ವಿದ್ಯುತ್ ಬಳಸಿ ಚಾಲನೆ ಮಾಡಲಾಗುತ್ತದೆ. ಇದು ಜಗತ್ತಿನ ಮೊದಲ ವಿದ್ಯುತ್ ರೈಲ್ವೆ ಜಾಲ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
* ರೈಲ್ವೆ ಇಲಾಖೆಯು 2014ರಿಂದ ರೈಲ್ವೆಯ ವಿದ್ಯುದ್ದೀಕರಣಕ್ಕಾಗಿ 46,425 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆದರೆ, ಡೀಸೆಲ್ ಎಂಜಿನ್‌ಗಳ ಜಾಗದಲ್ಲಿ ಎಲೆಕ್ನಿಕ್ ಎಂಜಿನ್‌ಗಳನ್ನು ಅಳವಡಿಸಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗುತ್ತದೆ.
* ರೈಲ್ವೆಯು 2023-24ರಲ್ಲಿ 7,188 ಕಿ.ಮೀ ರೈಲು ಜಾಲವನ್ನು ವಿದ್ಯುದ್ದೀಕರಿಸಿದೆ. ಕಳೆದ ವರ್ಷ ವಿದ್ಯುದ್ದೀಕರಣಗೊಂಡ ಮಾರ್ಗಗಳಲ್ಲಿ ಅಹಮದಾಬಾದ್- ರಾಜ್ ಕೋಟ್- ಓಖಾ (499 ಕಿ.ಮೀ), ಬೆಂಗಳೂರು-ತಾಳಗುಪ್ಪಾ (371 ಕಿ.ಮೀ) ಹಾಗೂ ಭಟಿಂಡಾ- ಫಿರೋಜ್ಪುರ- ಜಲಂಧರ್ (301 ಕಿ.ಮೀ) ಸೇರಿವೆ. ರೈಲ್ವೆ ಇಲಾಖೆಯಲ್ಲಿನ ಈ ಬೆಳವಣಿಗೆಯಿಂದಾಗಿ 2027-28ರ ವೇಳೆಗೆ ಶೇ.24ರಷ್ಟು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. 2014-15ರಿಂದ ಈಚೆಗೆ ರೈಲ್ವೆಯು ಬ್ರಾಡ್ ಗೇಜ್ ನೆಟ್‌ವರ್ಕ್‌ನ 40 ಸಾವಿರ ಕಿ.ಮೀಗಳನ್ನು ವಿದ್ಯುದ್ದೀಕರಣ ಮಾಡಿದೆ
* ಇಂಗ್ಲೆಂಡ್, ಅಮೆರಿಕಕ್ಕಿಂತ ಮೊದಲು ವಿದ್ಯುದ್ದೀಕರಣದಲ್ಲಿ ಭಾರತ ಮುಂದೆ ಇದೆ.
* ಎನರ್ಜಿ ಮಾನಿಟರ್ ಮತ್ತು ಭಾರತೀಯ ರೈಲ್ವೆ'ಗಳ ಮಾಹಿತಿಯ ಪ್ರಕಾರ, ಭಾರತೀಯ ರೈಲ್ವೆಯು ಪ್ರಸ್ತುತ ಶೇ.95ರಷ್ಟು ವಿದ್ಯುದ್ದೀಕರಿಸಲ್ಪಟ್ಟಿದೆ.
ರವಿವಾರ, 14 ಎಪ್ರಿಲ್ 2024
11:28 ಪೂರ್ವಾಹ್ನ
Daily PDF
2024ರ ಅಂತ್ಯದ ವೇಳೆಗೆ ಭಾರತೀಯ ರೈಲ್ವೆ ಸಂಪೂರ್ಣ ವಿದ್ಯುತ್ತೀಕರಣ
Authored by:
Bhagya R K