* ಎಡೆಲ್‌ಗೀವ್- ಹುರೂನ್ ಇಂಡಿಯಾ ಗುರುವಾರ(ನ.07) ಬಿಡುಗಡೆ ಮಾಡಿರುವ ವರದಿ ಅನ್ವಯ ಎಚ್‌ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್ 2024ನೇ ಸಾಲಿನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ದಾನ ಮಾಡಿದ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
* ಪ್ರಸ್ತುತ ಸಾಲಿನಲ್ಲಿ ಶಿವ ನಾಡಾರ್ (3.14 ಲಕ್ಷ ಕೋಟಿ ರೂ. ಆಸ್ತಿ) ಅವರು 2153 ಕೋಟಿ ರೂ.ಗಳನ್ನು ಪರೋಪಕಾರಗಳಿಗೆ ದಾನವಾಗಿ ನೀಡಿದ್ದಾರೆ.
* ಇನ್ನು ದೇಶದ ನಂ.2 ಶ್ರೀಮಂತ ಮುಕೇಶ್ ಅಂಬಾನಿ (10.14 ಲಕ್ಷ ಕೋಟಿ ರೂ.ಆಸ್ತಿ) 407 ಕೋಟಿ ರೂ. ದಾನದ ಮೂಲಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದರೆ, ಬಜಾಜ್ ಕುಟುಂಬ 352 ಕೋಟಿ ರೂ. ನೊಂದಿಗೆ 3ನೇ ಸ್ಥಾನ, ಬಿರ್ಲಾ ಸಮೂಹದ ಕುಮಾರ ಮಂಗಳಂ ಬಿರ್ಲಾ 334 ಕೋಟಿ ರೂ.ನೊಂದಿಗೆ 4ನೇ ಸ್ಥಾನ ಮತ್ತು ದೇಶದ ನಂ.1 ಉದ್ಯಮಿ ಗೌತಮ್ ಅದಾನಿ (11.16 ಲಕ್ಷ ಕೋಟಿ ರೂ. ಆಸ್ತಿ) 330 ಕೋಟಿ ರೂ. ದಾನದೊಂದಿಗೆ 5ನೇ ಸ್ಥಾನ ಪಡೆದಿದ್ದಾರೆ.
* 2023ರ ಪಟ್ಟಿಯಲ್ಲಿ 199 ದಾನಿಗಳ ಸರಾಸರಿ ದಾನದ ಪ್ರಮಾಣ 71 ಕೋಟಿ ರೂ. ನಷ್ಟು ಇದ್ದರೆ, ಪ್ರಸಕ್ತ ಸಾಲಿನಲ್ಲಿ 203 ದಾನಿಗಳನ್ನು ಪರಿಶೀಲಿಸಿದಾಗ ಸರಾಸರಿ ದಾನದ ಪ್ರಮಾಣ 43 ಕೋಟಿ ರೂ. ಗೆ ಇಳಿದಿದೆ.
* ವಿವಿಧ ವ್ಯಕ್ತಿಗಳಿಂದ ದಾನ ಪಡೆಯುವಲ್ಲಿ ಶಿಕ್ಷಣ ಮೊದಲ ಸ್ಥಾನದಲ್ಲಿದೆ. ಶಿಕ್ಷಣಕ್ಕೆ ಪ್ರಸಕ್ತ ವರ್ಷ 3680 ಕೋಟಿ ರೂ. ದಾನ ನೀಡಲಾಗಿದೆ. ನಂತರದ ಸ್ಥಾನದಲ್ಲಿರುವ ಆರೋಗ್ಯ ಕ್ಷೇತ್ರಕ್ಕೆ 626 ಕೋಟಿ ರೂ.ಮತ್ತು ಗ್ರಾಮೀಣ ಅಭಿವೃದ್ಧಿಗೆ 331 ಕೋಟಿ ರೂ. ಹಣವನ್ನು ದಾನವಾಗಿ ನೀಡಲಾಗಿದೆ.
* ಹೆಚ್ಚು ದಾನ ಮಾಡಿದ ವ್ಯಕ್ತಿಗಳ ಪಟ್ಟಿ :
1. ಶಿವ ನಾಡಾರ್ - 2153 ಕೋಟಿ ರೂ.
2. ಮುಕೇಶ್ ಅಂಬಾನಿ - 407 ಕೋಟಿ ರೂ.
3. ಬಜಾಜ್ ಕುಟುಂಬ - 352 ಕೋಟಿ ರೂ.
4. ಕುಮಾರ ಮಂಗಳಂ ಬಿರ್ಲಾ - 334 ಕೋಟಿ ರೂ.
5. ಗೌತಮ್ ಅದಾನಿ - 330 ಕೋಟಿ ರೂ.
6. ನಡನ ನಿಲೇಕಣಿ - 307 ಕೋಟಿ ರೂ.
7. ಅಜೀಂ ಪ್ರೇಮ್‌ಜಿ - 152 ಕೋಟಿ ರೂ.
* ಮಹಿಳಾ ವಿಭಾಗದ ದಾನಗಳ ಪಟ್ಟಿ :
1. ರೋಹಿಣಿ ನಿಲೇಕಣಿ - 154 ಕೋಟಿ ರೂ.
2. ಸುಸ್ಮಿತಾ ಬಾಗ್ಚ್ - 90 ಕೋಟಿ ರೂ.
ಶುಕ್ರವಾರ, 08 ನವೆಂಬರ್ 2024
11:01 ಪೂರ್ವಾಹ್ನ
Daily PDF
ಎಚ್‌ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್ ಭಾರತದ ನಂ.1 ದಾನಿ
Authored by:
Yallamma G